Sunday, June 7, 2026
spot_imgspot_img
spot_imgspot_img

ಬೆಳ್ಳಂಬೆಳ್ಳಗೆ ರೌಡಿಗಳ ಮೇಲೆ ಪೊಲೀಸ್ ಫೈರಿಂಗ್

- Advertisement -
- Advertisement -

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳ್ಳಗೆ ಎರಡು ಕಡೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಇಬ್ಬರು ಆರೋಪಿಗಳ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಮಂಜ ಯಾನೆ ಬೋಂಡ ಮಂಜನನ್ನು ನಾರಾಯಣ ನಗರ ಡಬಲ್ ರೋಡ್ ಬಳಿ ಬಂಧಿಸಲು ಯತ್ನಿಸಿದಾಗ ಆರೋಪಿ ಸಿಸಿಬಿ ಪೊಲೀಸರ ಮೇಲೆ ಹಲ್ಲೆ ನಡೆಸಿದ .ಈ ಸಂದರ್ಭದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ನೇತೃತ್ವದ ತಂಡ ಮಂಜನ ಮೇಲೆ ಗುಂಡಿನ ದಾಳಿ ನಡೆಸಿದೆ. 23 ಪ್ರಕರಣಗಳಲ್ಲಿ ಮಂಜ ಆರೋಪಿಯಾಗಿದ್ದಾನೆ.

ಬ್ಯಾಡರಹಳ್ಳಿ ಬ್ರಹ್ಮದೇವರ ಬೆಟ್ಟದಲ್ಲಿ ಆರೋಪಿ ವಿಶ್ವನ ಮೇಲೂ ಸಿಸಿಬಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಕೊಲೆ ಆರೋಪಿಯಾಗಿರುವ ವಿಶ್ವ ಸೈಕೋ ವಿಶ್ವ ಎಂಬ ಹೆಸರಿನಿಂದ ಕುಖ್ಯಾತಿಪಡೆದಿದ್ದ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ವಿಶ್ವನಿಗೆ ಪೊಲೀಸರು ಗುಂಡಿನಿಂದಲೇ ಉತ್ತರ ನೀಡಿದ್ದಾರೆ.

ಎರಡು ಗುಂಡಿನ ದಾಳಿ ನಡೆಸುವುದರ ಮೂಲಕ ರೌಡಿ ಶೀಟರ್ ಗಳಿಗೆ ಪೊಲೀಸರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

- Advertisement -

Related news

error: Content is protected !!