Saturday, May 4, 2024
spot_imgspot_img
spot_imgspot_img

ಬಲವಂತದ ಮತಾಂತರ ಪ್ರಕರಣ, ಮೂವರ ವಿರುದ್ಧ ದಾಖಲಾಯ್ತು ಎಫ್‌ಐಆರ್

- Advertisement -G L Acharya panikkar
- Advertisement -


ರಾಜ್ಯದಲ್ಲಿ ಬಡಕುಟುಂಬಗಳನ್ನೇ ಟಾರ್ಗೆಟ್ ಮಾಡಿ ಅನ್ಯ ಮತಕ್ಕೆ ಬಲವಂತದ ಮತಾಂತರ ಪದೇ ಪದೇ ಬೆಳಕಿಗೆ ಬರುತ್ತಿದೆ. ಈಗ ಮತ್ತೊಂದು ಆರೋಪ ಕೇಳಿಬಂದಿದ್ದು ಚರ್ಚ್‌ನ ಪಾಸ್ಟರ್‍ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕೊಪ್ಪಳ್ಳದಲ್ಲಿ ಬಲವಂತವಾಗಿ ಮತಾಂತರ ಮಾಡಿದ ಪ್ರಕರಣ ವರದಿಯಾಗಿದೆ. ಚರ್ಚ್‌ನ ಪಾಸ್ಟರ್ ಸೇರಿ ಮೂರು ಜನರ ವಿರುದ್ದ ದೂರು ದಾಖಲಾಗಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಲವಂತದ ಮತಾಂತರ ಹಾಗೂ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಚರ್ಚ್ ಪಾಸ್ಟರ್ ಸತ್ಯನಾರಾಯಣ ಅಲಿಯಾಸ್ ಸ್ಯಾಮುಯೇಲ್ ಮತ್ತು ಪತ್ನಿ ಶಿವಮ್ಮ ಅಲಿಯಾಸ್ ಸಾರಾ ಹಾಗೂ ಮಗ ಚಿರಂಜೀವಿ ಡ್ಯಾನುವಲ್ (17) ವಿರುದ್ಧ ಕೇಸ್ ದಾಖಲಾಗಿದೆ.

ಕರಟಗಿಯ ರಾಮನಗರದಲ್ಲಿ ಗ್ರೇಸ್ ಪ್ರಾರ್ಥನಾ ಮಂದಿರ ನಡೆಸುತ್ತಿರುವ ಸ್ಯಾಮುಯೇಲ್, ಬಡವರನ್ನೇ ಟಾರ್ಗೆಟ್ ಮಾಡಿ ಕ್ರೈಸ್ತಧರ್ಮಕ್ಕೆ ಮತಾಂತರ ಮಾಡುತ್ತಿದ್ದ. ಹಿಂದೂ ದೇವತೆಗಳನ್ನ ನದಿಯಲ್ಲಿ ಎಸೆಯುವಂತೆ ಹೇಳುತ್ತಿದ್ದ. ಅಲ್ಲದೇ ಮತಾಂತರವಾಗಿ ಹಿಂದೂ ದೇವರನ್ನ ಪೂಜೆ ಮಾಡಿದ್ರೆ ಕೊಲೆ, ಅತ್ಯಾಚಾರ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ 4 ವರ್ಷಗಳ ಹಿಂದೆಯೇ ಮತಾಂತರಗೊಂಡ ಬಡ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ಅನ್ವಯ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಅತ್ಯಾಚಾರ ಪ್ರಕರಣವನ್ನೂ ಬಯಲಿಗೆಳೆದಿದ್ದಾರೆ. ಚರ್ಚ್ ಪಾಸ್ಟರ್‌ನ 17 ವರ್ಷದ ಮಗನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ ಆಗಿರುವುದು ಕಂಡುಬಂದಿದೆ.

ಶ್ರೀರಾಮನಗರದಲ್ಲಿ ಗ್ರೇಸ್ ಪ್ರಾರ್ಥನಾ ಮಂದಿರವನ್ನ ನಡೆಸುತ್ತಿರುವ ಸ್ಯಾಮುಯೇಲ್ ಹಾಗೂ ಪತ್ನಿ ಹೆದರಿಸಿ, ಬೆದರಿಸಿ ಮತಾಂತರ ಮಾಡುತ್ತಿದ್ದರು. ಈ ವೇಳೆ ಚರ್ಚ್‌ನಲ್ಲಿ ಉಚಿತ ಸೇವೆ ನೀಡುವುದಾಗಿ ಬಡ ಕುಟುಂಬದ ಅಪ್ರಾಪ್ತೆಯನ್ನ ಕರೆಸಿ, ಮದುವೆಯಾಗುವುದಾಗಿ ನಂಬಿಸಿದ್ದ ಪಾಸ್ಟರ್ ಮಗ ಚಿರಂಜೀವಿ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

- Advertisement -

Related news

error: Content is protected !!