Tuesday, May 21, 2024
spot_imgspot_img
spot_imgspot_img

ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಪ್ರೇಮಿಗಳು!!

- Advertisement -G L Acharya panikkar
- Advertisement -
driving

ಬೆಂಗಳೂರು: ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಪ್ರೇಮಿಗಳಿಬ್ಬರನ್ನು ಬೆಂಗಳೂರಿನ ಚಂದ್ರಲೇಔಟ್ ಠಾಣೆಯ ಪೊಲೀಸಲು ಬಂಧಿಸಿದ್ದಾರೆ. ಬಂಧಿತ ಪ್ರೇಮಿಗಳನ್ನು ವಿನಯ್ (32) ಹಾಗೂ ಪ್ರೇಯಸಿ ಕೀರ್ತನಾ(25) ಎನ್ನಲಾಗಿದೆ.

ಪ್ರೇಯಸಿಗೆ ಗಿಫ್ಟ್ ಕೊಡಲು ಕಳ್ಳತನಕ್ಕೆ ಇಳಿದಿದ್ದ ಪ್ರಿಯಕರನಿಗೆ ಪ್ರೇಯಸಿಯೇ ಸಾಥ್​ ಕೊಡುತ್ತಿದ್ದಳು ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಪ್ರೇಮಿ ವಿನಯ್, ರಾಜಾಜಿನಗರದ ರೌಡಿಶೀಟರ್. ಗಿಫ್ಟ್‌ ಕೊಡಿಸುವಂತೆ ವಿನಯ್​ನನ್ನು ಪ್ರೇಯಸಿ ಕೀರ್ತನಾ ಪೀಡಿಸುತ್ತಿದ್ದಳು.

ಹೀಗಾಗಿ, ವಿನಯ್​ ಒಂದು ಖತರ್ನಾಕ್ ಐಡಿಯಾ ಮಾಡಿದ್ದು, ಇದಕ್ಕೆ ಪ್ರೇಯಸಿಯು ಕೂಡ ಸಾಥ್​ ನೀಡಿದ್ದಾಳೆ. ಇಬ್ಬರು ಬೈಕ್​ನಲ್ಲಿ ಏರಿಯಾ ರೌಂಡ್ಸ್ ಹಾಕಿ ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದರು. ಮನೆ ಖಾಲಿ ಇದೆ ಎಂಬ ಫಲಕವೇ ಇವರ ಬಂಡವಾಳವಾಗಿತ್ತು. ಮನೆಯ ಬಗ್ಗೆ ವಿಚಾರಿಸಲು ಮಾಲೀಕರ ಮನೆಗೆ ತೆರಳಿ ಅವರ ಕಣ್ತಪ್ಪಿಸಿ ಖತರ್ನಾಕ್​ ಪ್ರೇಮಿಗಳು ಕಳ್ಳತನ ಮಾಡುತ್ತಿದ್ದರು.

ಅಕ್ಟೋಬರ್ 4 ರಂದು ಮಾರುತಿ ನಗರದಲ್ಲಿ ಕಳ್ಳತನ ನಡೆದಿತ್ತು. ಕುಲಶೇಖರ್ ಎಂಬುವರ ಮನೆಯಲ್ಲಿ ಪ್ರೇಮಿಗಳು ಲ್ಯಾಪ್ ಟಾಪ್ ಕದ್ದಿದ್ದರು. ಈ ಬಗ್ಗೆ ಅವರು ದೂರು ನೀಡಿದ್ದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದ ಚಂದ್ರಲೇಔಟ್ ಠಾಣಾ ಪೊಲೀಸರು ಆರೋಪಿ ಪ್ರೇಮಿಗಳನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!