Thursday, April 25, 2024
spot_imgspot_img
spot_imgspot_img

ಲಾಕ್​ ಡೌನ್​ನಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳು ಸೆರೆ!

- Advertisement -G L Acharya panikkar
- Advertisement -

ಬೆಂಗಳೂರು: ಲಾಕ್​ ಡೌನ್​ನಲ್ಲಿ ಹಣಗಳಿಸಲು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜೆ.ಜೆ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಕಬೀರ್ (20), ರೋಷನ್ (20), ಅಸ್ಟರ್ ಪಾಷಾ (20) ಹಾಗೂ ಬಂಧಿತರಿಂದ 4 ಲಕ್ಷ ರೂ. ಮೌಲ್ಯದ ಆರು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಜೆ.ಜೆ ನಗರ, ಕೆಂಗೇರಿ, ಕುಂಬಳಗೋಡು, ಸಿಟಿ ಮಾರ್ಕೇಟ್, ವಿಜಯನಗರ ಸೇರಿ ನಗರದ ವಿವಿಧೆಡೆ ದ್ವಿಚಕ್ರ ವಾಹನ​ ಕದ್ದು ಪರಾರಿಯಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಸರಣಿ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆ ಚುರುಗೊಳಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Related news

error: Content is protected !!