Saturday, June 28, 2025
spot_imgspot_img
spot_imgspot_img

ಬಾಂಗ್ಲಾದಿಂದ ದೆಹಲಿಗೆ ಬಂದಿಳಿದ ಬಾಂಗ್ಲಾದೇಶದ ನಾಯಕಿ ಶೇಖ್ ಹಸೀನಾ

- Advertisement -
- Advertisement -

ಬಾಂಗ್ಲಾದೇಶದ ನಾಯಕಿ, ಮಾಜಿ ಪ್ರಧಾನಿ ಶೇಖ್ ಹಸೀನಾ ಸೋಮವಾರ ಸಂಜೆ ದಿಲ್ಲಿ ಸಮೀಪದ, ಉತ್ತರ ಪ್ರದೇಶದ ಗಾಝಿಯಾಬಾದ್‌ನಲ್ಲಿರುವ ಹಿಂಡನ್ ವಾಯುಪಡೆ ನೆಲೆಗೆ ಬಂದಿಳಿದಿದ್ದಾರೆ.

ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯು ನಾಗರಿಕ ದಂಗೆಯಾಗಿ ಬದಲಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ಶೇಖ್‌ ಹಸೀನಾ , ಭಾರತಕ್ಕೆ ಬಂದಿಳಿದಿದ್ದಾರೆ. ದೆಹಲಿಯಲ್ಲಿರುವ ಹಿಂಡನ್‌ ಏರ್‌ಫೋರ್ಸ್‌ ವಾಯುನೆಲೆಗೆ ಬಂದಿಳಿದಿದ್ದು, ವಾಯುಪಡೆ ಅಧಿಕಾರಿಗಳು ಶೇಖ್‌ ಹಸೀನಾ ಅವರನ್ನು ಸ್ವಾಗತಿಸಿದ್ದಾರೆ ಎಂದು ತಿಳಿದುಬಂದಿದೆ. ಬಿಗಿ ಭದ್ರತೆಯಲ್ಲಿ ಶೇಖ್‌ ಹಸೀನಾ ಅವರು ದೆಹಲಿಗೆ ಬಂದಿಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಾಣಭಯದ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದಿರುವ ಶೇಖ್‌ ಹಸೀನಾ, ಶೀಘ್ರದಲ್ಲಿಯೇ ಲಂಡನ್‌ಗೆ ಹಾರಲಿದ್ದಾರೆ ಎಂದು ತಿಳಿದುಬಂದಿದೆ. ತಾತ್ಕಾಲಿಕವಾಗಿ ಭಾರತದಲ್ಲಿ ಆಶ್ರಯ ಪಡೆಯುವ ಅವರು ಬಳಿಕ ಲಂಡನ್‌ಗೆ ತೆರಳಿ, ಅಲ್ಲಿಯೇ ಕೆಲ ಕಾಲ ನೆಲೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ, ಶ್ರೀಲಂಕಾದಲ್ಲೂ ನಾಗರಿಕ ದಂಗೆಗಳು ಉಂಟಾದಾಗ, ಆ ದೇಶಗಳ ನಾಯಕರು ವಿದೇಶದಲ್ಲಿ ಆಶ್ರಯ ಪಡೆದಿದ್ದರು. ಈಗಲೂ ಕೆಲ ನಾಯಕರು ವಿದೇಶಗಳಲ್ಲಿಯೇ ನೆಲೆಸಿದ್ದಾರೆ.

- Advertisement -

Related news

error: Content is protected !!