Wednesday, December 4, 2024
spot_imgspot_img
spot_imgspot_img

ಮಾತೆರ್ಲ ಒಂಜೇ ವಾಟ್ಸ್ ಆಫ್ ಗ್ರೂಪ್ ಪುತ್ತೂರು ಇದರ ಆಶ್ರಯದಲ್ಲಿ ’ಬಣ್ಣದ ಗಜಮುಖ-23’ ಚಿತ್ರಕಲಾ ಸ್ಪರ್ಧೆ

- Advertisement -
- Advertisement -

ಮಾತೆರ್ಲ ಒಂಜೇ ವಾಟ್ಸ್ ಆಫ್ ಗ್ರೂಪ್ ಪುತ್ತೂರು ಇದರ ಆಶ್ರಯದಲ್ಲಿ ನಡೆದ ಈ ವರ್ಷದ ಗಣೇಶೋತ್ಸವದ ಪ್ರಯುಕ್ತ ನಡೆದ ಬಣ್ಣದ ಗಜಮುಖ-23 ಸಾರ್ವಜನಿಕ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆಯು ನೆಹರು ನಗರದ ಕಛೇರಿಯಲ್ಲಿ ನಡೆಯಿತು.

ವಿಜೇತರಿಗೆ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಅದೇ ರೀತಿ ಭಾಗವಹಿಸಿದ ಪ್ರತಿ ಸದಸ್ಯರಿಗೆ ಅಭಿನಂದನ ಪತ್ರ ನೀಡುವ ಮೂಲಕ ಎಲ್ಲಾ ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಲಾಯಿತು.

ವಿಶೇಷವಾಗಿ 12 ಜನರಿಂದ ಆರಂಭಗೊಂಡ ಈ ಗ್ರೂಪ್, ಇದರ ಮೂಲಕ ಹಲವಾರು ‌ಸಮಾಜಮುಖಿ ಸಹಾಯ ‌ಹಸ್ತ ನೀಡುವ ಕೆಲಸ ನಡೆಯುತ್ತ ಬಂದಿದ್ದು ಯಾವುದೇ ರಾಜಕೀಯ ನಡೆಯಿಲ್ಲದೇ ನಾವೆಲ್ಲರೂ ಒಂದೇ ಎಂಬ ಧ್ಯೇಯದ‌ ಮೂಲಕ ಈ ತಂಡ‌ ಮುನ್ನಡೆಯುತ್ತಿದೆ. ತಂಡದಲ್ಲಿ ಸರಕಾರಿ ಅಧಿಕಾರಿಗಳು, ಉದ್ಯಮಿಗಳು, ಸಾಮಾಜಿಕ ಮುಖಂಡರು ಇದರಲ್ಲಿದ್ದು ಪ್ರಚಾರಕ್ಕಲ್ಲದೇ ಪ್ರೇರಣೆಗಾಗಿ ನಡೆಸುವ‌ ಕಾರ್ಯ‌‌‌ ಇದಾಗಿದೆ.

ಬಣ್ಣದ ಗಜಮುಖ 23 ಇದರ ಫಲಿತಾಂಶ

5 ರಿಂದ 7 ನೇ ತರಗತಿ
ಪ್ರಥಮ: ಲೇಖನ್
ದ್ವಿತೀಯ: ಸುರಭಿ ಮಂಗಳೂರು
ತೃತೀಯ :ಸುರೇಂದ್ರ ಪೈ ಉಡುಪಿ

8 ರಿಂದ 10 ನೇ ತರಗತಿ
ಪ್ರಥಮ: ನಿಹಾರಿಕಾ
ದ್ವಿತೀಯ: ನಿಲಿಷ್ಕಾ ಕಲ್ಪನೆ
ತೃತೀಯ: ಹಿಮಾಂಶು

ಒಟ್ಟು 43 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದ ಪ್ರತಿ ಸದಸ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

- Advertisement -

Related news

error: Content is protected !!