Sunday, May 19, 2024
spot_imgspot_img
spot_imgspot_img

ಬಂಟ್ವಾಳ: ಮಿನಿವಿಧಾನ ಸೌಧದ ಸರ್ವೇ ಇಲಾಖೆಯಲ್ಲಿ ಲಂಚ ಸ್ವೀಕಾರದ ಆರೋಪ; ಸರ್ವೇಯರ್’ನನ್ನು ಬಂಧಿಸಿದ ACB ಪೊಲೀಸರು

- Advertisement -G L Acharya panikkar
- Advertisement -

ಬಂಟ್ವಾಳ: ಸರ್ವೇ ಇಲಾಖೆಯ ಸರ್ವೇಯರ್‌ನನ್ನು ದ.ಕ.ಜಿಲ್ಲಾ ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಜಾಗದ ಗಡಿ ಗುರುತಿಗಾಗಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿ ಸರ್ವೇಯರ್ ಸುರೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಿ.ಸಿ.ರೋಡಿನಲ್ಲಿರುವ ಮಿನಿ ವಿಧಾನಸೌಧದ ಸರ್ವೇ ಇಲಾಖೆ ಕಚೇರಿಯಲ್ಲಿ ಮಹಿಳೆಯಿಂದ 6 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಂದರ್ಭ ಎಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿ ಸರ್ವೇಯರ್ ಸುರೇಶ್ ಎಂಬಾತನನ್ನು ಬಂಧಿಸಿದ್ದಾರೆ.

ಕಳ್ಳಿಗೆ ನಿವಾಸಿ ಪ್ರೀಮಾ ಸರಿತಾ ಪಿಂಟೋ ಅವರು ತಮ್ಮ ಜಾಗದ ಗಡಿಗುರುತಿಗೆ ಸರ್ವೇ ಮಾಡುವಂತೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆಗ ಸರ್ವೇಯರ್ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಮಹಿಳೆ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಪಶ್ಚಿಮ ವಲಯ ಎಸಿಬಿ ಎಸ್‌ಪಿ ಸೈಮನ್ ಅವರ ಮಾರ್ಗದರ್ಶನ ಡಿವೈಎಸ್‌ಪಿ ಕೆ.ಸಿ.ಪ್ರಕಾಶ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್‌ಗಳಾದ ಗುರುರಾಜ್ ಹಾಗೂ ಶ್ಯಾಮ್‌ಸುಂದರ್ ಎಸಿಬಿ ಸಿಬಂದಿ ಜತೆ ದಾಳಿ ನಡೆಸಿದ್ದರು.

- Advertisement -

Related news

error: Content is protected !!