Wednesday, July 22, 2026
spot_imgspot_img
spot_imgspot_img

ಬಂಟ್ವಾಳ: ಕೊರೊನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿದ ವೈದ್ಯಾಧಿಕಾರಿಗಳಿಗೆ ಸನ್ಮಾನ

- Advertisement -
- Advertisement -

ಬಂಟ್ವಾಳ: ಮೂಡುಪಡುಕೋಡಿ ಬಿಜೆಪಿ ಬೂತ್ ಸಮಿತಿಯ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ 7ನೇ ವರ್ಷ ಪೂರ್ಣಗೊಳಿಸದ‌ ಸಂಭ್ರಮಾಚರಣೆಯ ಸೇವಾ ಚಟುವಟಿಕೆಯ ಅಂಗವಾಗಿ ಕೊರೊನಾ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಕೊರೊನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿದ ಪುಂಜಾಲಕಟ್ಟೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸತೀಶ್ ಎಂ.ಸಿ ಹಾಗೂ ಆಯುಷ್ ವೈದ್ಯಾಧಿಕಾರಿ ಸೋಹನ್ ಕುಮಾರ್ ಇವರನ್ನು ಗೌರವಿಸಲಾಯಿತು.

driving

ಈ ಸಂಧರ್ಭದಲ್ಲಿ ಮೂಡುಪಡುಕೋಡಿ ಬಿಜೆಪಿಯ ಹಿರಿಯ ಕಾರ್ಯಕರ್ತ ಪಿಲತ್ತಬೆಟ್ಟು ಸಹಕಾರಿ ಸಂಘದ ನಿರ್ದೇಶಕ ಬೂಬ ಸಪಲ್ಯ ಮುಂಡಬೈಲು, ಇರ್ವತ್ತೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಶಂಕರ್ ಶೆಟ್ಟಿ ಬೆದ್ರಮಾರ್, ದ.ಕ ಬಿಜೆಪಿ ಎಸ್.ಟಿ ಮೊರ್ಚಾದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎರ್ಮೆನಾಡು, ಮೂಡುಪಡುಕೋಡಿ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರು ಗ್ರಾ ಪಂ ಸದಸ್ಯರಾದ ದಯಾನಂದ್ ಎಸ್ ಎರ್ಮೆನಾಡು, ಪ್ರಧಾನ ಕಾರ್ಯದರ್ಶಿ ಮಿಥುನ್‌ ಪ್ರಭು ಮಲ್ಯಾರು, ಪಿಲತ್ತಬೆಟ್ಟು ಸಹಕಾರಿ ಸಂಘದ ನಿರ್ದೇಶಕ ದಿನೇಶ್ ಮೂಲ್ಯ ಬಂಗೇರೆಕೆರೆ ಉಪಸ್ಥಿತರಿದ್ದರು.

- Advertisement -

Related news

error: Content is protected !!