- Advertisement -
- Advertisement -




ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೋರ್ವರ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದು ಇರಿಸಿದ್ದ ಪರ್ಸ್ ಕಳವಾಗಿದ ಘಟನೆ ನಡೆದಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಾಗೆಕಾನ ಬಲ್ಯ ನಿವಾಸಿ ಕ್ರಿಸ್ತಿನ್ ವೇಗಸ್ ಅವರ ಪರ್ಸ್ ಕಳವಾಗಿದ್ದು, ಪರ್ಸ್ ನಲ್ಲಿ ಐದುವರೆ ಪವನ್ ತೂಕದ ಚಿನ್ನದ ಕರಿಮಣಿ ಸರ ಮತ್ತು ನಾಲ್ಕು ಗ್ರಾಂ ತೂಕದ ಚಿನ್ನದ ಉಂಗುರ ಒಟ್ಟು 48 ಗ್ರಾಂ ತೂಕದ ಚಿನ್ನಾಭರಣದ ಅಂದಾಜು ಮೌಲ್ಯ 6,24,000 ಎಂದು ತಿಳಿಸಿದ್ದಾರೆ.
ಇವರು ಗಂಡನ ಜೊತೆ ಉಜಿರೆಯಲ್ಲಿ ಸಂಬಂಧಿಕರೊಬ್ಬರ ಕಾರ್ಯಕ್ರಮಕ್ಕೆ ಹೋಗಿ ಬಸ್‌ನಲ್ಲಿ ವಾಪಸ್ ಮಂಗಳೂರು ಕಡೆಗೆ ಬರುವಾಗ ಈ ಘಟನೆ ಸಂಭವಿಸಿದ್ದು, ಮಹಿಳೆ ಬಿ.ಸಿ.ರೋಡಿನಲ್ಲಿ ಬಸ್ ಇಳಿದು ನೋಡುವಾಗ ಕಳವಾದ ವಿಚಾರ ಬೆಳಕಿಗೆ ಬಂದಿದೆ. ಈ ನಡುವೆ ಕಳ್ಳತನ ಆಗಿರುವ ಸಂಶಯವನ್ನು ಅವರು ದೂರಿನಲ್ಲಿ ತಿಳಿಸಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.
- Advertisement -








