Friday, April 19, 2024
spot_imgspot_img
spot_imgspot_img

ತಾಯಿ ಎತ್ತಿಕೊಂಡು ಕಾಲೇಜಿಗೆ ಬರುತ್ತಿದ್ದ ಪಿಯುಸಿ ವಿದ್ಯಾರ್ಥಿನಿಗೆ 467 ಅಂಕ..

- Advertisement -G L Acharya panikkar
- Advertisement -

ಬಂಟ್ವಾಳ : ಒಂದು ಕಡೆ ಬಡತನ, ಮತ್ತೊಂದು ಕಡೆ ಅಂಗ ವೈಕಲ್ಯ ಇವೆಲ್ಲವನ್ನೂ ಮೀರಿ  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 467 ಅಂಕ ಗಳಿಸಿಸುವ ಮೂಲಕ
ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ಇವರ ಸುಪುತ್ರಿ ಭಾಗ್ಯಶ್ರೀ ಸಾಧನೆ ಮಾಡಿದ್ದಾರೆ.ತಂದೆ ಕೇಶವರು ಕೂಡಾ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾದವರು. ಆದರೂ  ಜೀವನಾಧಾರಕ್ಕೆ ಮನೆಯ ಪಕ್ಕದಲ್ಲಿಯೇ ಒಂದು ಗೂಡಂಗಡಿಯನ್ನು ಇಟ್ಟುಕೊಂಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿದ್ದು ಹಿರಿಯ ಮಗಳು ದ್ವಿತೀಯ ಬಿ.ಕಾಂ ಓದುತ್ತಿದ್ದಾಳೆ. ತಾಯಿಗೆ ಬೀಡಿ ಕಟ್ಟುವುದೇ ಕಾಯಕ. ಕಿರಿಯ ಮಗಳು ಭಾಗ್ಯಶ್ರೀ.

ಭಾಗ್ಯಶ್ರೀ ಅವರ ಸೊಂಟದ ಕೆಳಗೆ ಕಾಲುಗಳು ಬಲವೇ ಇಲ್ಲ : ಆದರೆ ಕಲಿಕೆಯಲ್ಲಿ ಭಾರೀ ಆಸಕ್ತಿ. ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಲೊರೆಟ್ಟೋ ಚರ್ಚ್ ಶಾಲೆಯಲ್ಲಿ ಕಲಿತು ಅಲ್ಲಿಯೂ ಉತ್ತಮ ಅಂಕಗಳನ್ನೇ ಪಡೆದುಕೊಂಡಿದ್ದಾಳೆ. ಅಮ್ಮ ಎತ್ತಿಕೊಂಡು ಹೋಗಿಯೇ ಅವಳನ್ನು ಶಾಲೆಗೆ ಬಿಟ್ಟು ಅಲ್ಲಿಯೇ ಇದ್ದು ಮತ್ತೆ ಸಂಜೆ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಎಸ್.ಎಸ್.ಎಲ್.ಸಿಯಲ್ಲಿ 470 ಅಂಕಗಳನ್ನು ಪಡೆದು ಉತ್ತೀರ್ಣಳಾಗಿ ಮುಂದೆ ಪಿಯುಸಿಗೆ ಎಸ್.ವಿ.ಎಸ್ ಪದವಿಪೂರ್ವ ಕಾಲೇಜನ್ನು ಸೇರಿದ ಇವಳದ್ದು ಎಲ್ಲರೂ ನೆನಪಿಟ್ಟುಕೊಳ್ಳುವಂತಹ ಸಾಧನೆ.

ವೀಲ್‌ಚೇರ್‌ನಲ್ಲೆ ಕುಳಿತ ಪಾಠ ಕಲಿಕೆ : ತಾಯಿ ರಿಕ್ಷಾ ಬಾಡಿಗೆ ಮಾಡಿಕೊಂಡು ಬಂದು ಮಗಳನ್ನು ಎತ್ತಿಕೊಂಡು ಬಂದೇ ಕಾಲೇಜಿಗೆ ಬಿಡುತ್ತಿದ್ದರು. ಅಲ್ಲಿ ವೀಲ್ ಚೇರ್‌ನಲ್ಲಿಯೇ ಇವಳ ಕಲಿಕೆ ಸಾಗುತ್ತಿತ್ತು. ಅವಳ ಸ್ನೇಹಿತೆಯರು ಕೂಡಾ ಬಿಡುವಿನ ಹೊತ್ತಿನಲ್ಲಿ ಇವಳನ್ನು ವೀಲ್ ಚೇರ್‌ನಲ್ಲಿಯೇ ಕರೆದುಕೊಂಡು ಹೋಗುತ್ತಿದ್ದುದು ಎಲ್ಲರೂ ಅವಳನ್ನು ಪ್ರೀತಿಸುವವರೇ ಆಗಿದ್ದರು. ಮುಂದೆ ದೂರ ಶಿಕ್ಷಣದಲ್ಲಿ ಬಿ.ಕಾಂ ಮಾಡುವುದು ಇವಳ ಕನಸಾಗಿದೆ. ಇಂತಹ ವಿದ್ಯಾರ್ಥಿಗಳು ಸಣ್ಣ ವಿಷಯಕ್ಕೂ ಹೆದರಿ ಸೋತು ಬಿಡುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.

ನನ್ನ 12 ವರ್ಷಗಳ ವಿದ್ಯಾಭ್ಯಾಸದಲ್ಲಿಯೂ ನನ್ನ ಬೆನ್ನೆಲುಬಾಗಿ, ನನ್ನನ್ನು ಎತ್ತಿಕೊಂಡೇ ಬಂದು ಅಮ್ಮ ಸಹಾಯ ಮಾಡಿದ್ದಾರೆ. ಅವರಿಂದಾಗಿ ನಾನು ಇಷ್ಟು ಕಲಿಯಲು ಸಾಧ್ಯವಾಯಿತು. ಇನ್ನು ಮನೆಯಲ್ಲಿಯೇ ಇದ್ದು ದೂರಶಿಕ್ಷಣದಲ್ಲಿ ಬಿ.ಕಾಂ. ಕಲಿಯಬೇಕೆಂಬ ಆಸೆ ನನ್ನದು. ನನ್ನ ಸ್ನೇಹಿತರು, ಉಪನ್ಯಾಸಕರು ನನಗೆ ಒಳ್ಳೆಯ ಪ್ರೋತ್ಸಾಹ ನೀಡಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ.” — ” ಭಾಗ್ಯಶ್ರೀ
- Advertisement -

Related news

error: Content is protected !!