Tuesday, July 21, 2026
spot_imgspot_img
spot_imgspot_img

ಬಂಟ್ವಾಳ: ಮನೆಗೆ ನುಗ್ಗಿ ಕಳ್ಳತನ; 61 ಗ್ರಾಂ ಚಿನ್ನಾಭರಣ ಕಳವು

- Advertisement -
- Advertisement -

ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜ ಎಂಬಲ್ಲಿ ಭಾನುವಾರ ತಡ ರಾತ್ರಿ ವೇಳೆ ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.

ಕಳ್ಳರು ಮಧ್ಯರಾತ್ರಿಯಿಂದ ಬೆಳಗಿನ ಅವಧಿಯಲ್ಲಿ ಹಿಂಬದಿ ಬಾಗಿಲನ ಚಿಲಕವನ್ನು ಯಾವುದೋ ಸಾಧನದಿಂದ ಮುರಿದು ಮನೆಯ ಒಳಗೆ ಪ್ರವೇಶಿಸಿ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಒಟ್ಟು 61 ಗ್ರಾಂ ಚಿನ್ನ ಕಳವಾಗಿದೆ ಎಂದು ಮನೆಯೊಡತಿಯ ಪುತ್ರಿ ಅನಿಷಾ ಎಂಬವರು ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ.

ಕಳವು ನಡೆದ ಬಗ್ಗೆ ಬೆಳಗ್ಗೆ ಗೊತ್ತಾಗಿದ್ದು, ಚಿನ್ನಾಭರಣಗಳಿಗಾಗಿ ಮನೆಯೆಲ್ಲ ಹುಡುಕಾಡಿದ ಬಳಿಕ ಕಳವಾಗಿರಬಹುದು ಎಂಬ ಶಂಕೆಯಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!