Friday, March 29, 2024
spot_imgspot_img
spot_imgspot_img

ಸಂಸಾರದಲ್ಲಿ ಬಿರುಕು ತಂದಿದ್ದ ಜ್ಯೋತಿಷಿಯನ್ನು ಹಲ್ಲೆಗೈದ, ಆರೋಪಿಯ ಬಂಧನ!

- Advertisement -G L Acharya panikkar
- Advertisement -

ಬಂಟ್ವಾಳ: ಬಿ.ಸಿ.ರೋಡಿನ ವಾಣಿಜ್ಯ ಸಂಕೀರ್ಣದಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಲಕ್ಷ್ಮೀಕಾಂತ ಭಟ್ ಯಾನೆ ಹನುಮಂತಪ್ಪ ಎಂಬ ವ್ಯಕ್ತಿಗೆ ಈ ಹಿಂದೆ ಪಂಜಿಕಲ್ಲು ನಿವಾಸಿ ಮೋಹನ ಪ್ರಭು (38) ಹಲ್ಲೆ ನಡೆಸಿದ್ದ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು , ಆರೋಪಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಮೋಹನ ಪ್ರಭು ವೈಯಕ್ತಿಕ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ‘ಸುಮಾರು ಒಂದು ವರ್ಷದ ಹಿಂದೆ ಜ್ಯೋತಿಷಿಯು ತನ್ನ ಸಂಸಾರದಲ್ಲಿ ಬಿರುಕು ತಂದಿದ್ದ , ತನ್ನ ಹೆಂಡತಿ ತನ್ನನ್ನು ಬಿಟ್ಟುಹೋಗಲು ಜ್ಯೋತಿಷಿಯೇ ಕಾರಣವಾಗಿದ್ದ’ ಎಂಬ ಕೋಪದಲ್ಲಿ ಪ್ರಭು, ಜ್ಯೋತಿಷ್ಯ ಕೇಳುವ ನೆಪದಲ್ಲಿ ಆಗಮಿಸಿ ರಾಡ್ ನಿಂದ ಹನುಮಂತಪ್ಪನ ತಲೆಗೆ ಹೊಡೆದು ಪರಾರಿಯಾಗಿದ್ದನು. ಬಂಟ್ವಾಳ ಇನ್ಸ್ ಪೆಕ್ಟರ್ ಚೆಲುವರಾಜು ನೇತೃತ್ವದಲ್ಲಿ ಅಪರಾಧ ವಿಭಾಗ ಎಸ್.ಐ. ಕಲೈಮಾರ್ ಅವರ ತಂಡ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ..

ಜ್ಯೋತಿಷ್ಯಾಲಯಕ್ಕೆ ಆಗಮಿಸುವ ವೇಳೆ ಪ್ರಭು ತನ್ನ ಈಗಿನ ಹೆಂಡತಿಯೊಂದಿಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು, ಹಲ್ಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

- Advertisement -

Related news

error: Content is protected !!