



ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು (ರಿ.) ಆಶ್ರಯದಲ್ಲಿ ವಿಂಶತಿ ಸಂಭ್ರಮವು ಮೇ. 24-5-2025ನೇ ಶನಿವಾರ ಮತ್ತು 25-5-2025ನೇ ಆದಿತ್ಯವಾರ ಬೋಳಂತೂರುಗುತ್ತು ಗಂಗಾಧರ ರೈ ಸಂಕೀರ್ಣ ’ಬಂಟವಾಳದ ಬಂಟರ ಭವನ’ ವಳವೂರು ತುಂಬೆಯಲ್ಲಿ ನಡೆಯಲಿದೆ.
ದಿನಾಂಕ: 24-5-2025ನೇ ಶನಿವಾರ ಮಧ್ಯಾಹ್ನ 2:00ಗಂಟೆಗೆ ಬಂಟವಾಳ ತಾಲೂಕು ವಲಯ ಬಂಟೆ ಸಂಘಗಳ ’ನೃತ್ಯ ಸ್ಪರ್ಧೆ’ ನಡಯಲಿದೆ. ಪುತ್ತೂರು ಉದ್ಯಮಿ ಸಹಜ್ ರೈ ಬಳಜ್ಜ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಸಂಜೆ 5:00ಕ್ಕೆ ವಿಂಶತಿ ಸಂಭ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಬಂಟರ ಸಂಘ ಬಂಟವಾಳ ತಾಲೂಕು(ರಿ.) ಸ್ಥಾಪಕಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ, ರಾಜಲಕ್ಷ್ಮೀ ವಿದ್ಯಾಸಂಸ್ಥೆ ಅಧ್ಯಕ್ಷ ರಾಜೇಶ್ ಚೌಟ ಸುಜೀರುಗುತ್ತು, ಜಾಗತಿಕ ಬಂಟರ ಸಂಘ ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ ಕರ್ನಿರೆ, ಉದ್ಯಮಿ ಕೆ.ಕೆ ಶೆಟ್ಟಿ ಕುತ್ತಿಕಾರ್, ಕರಾವಳಿ ಕಲರ್ ಕಾರ್ಟನ್ಸ್.ಲಿ. ಕೆ.ಪಿ. ಶೆಟ್ಟಿ ಮೊಡಂಕಾಪುಗುತ್ತು, ಉದ್ಯಮಿ ರಘು ಎಲ್ ಶೆಟ್ಟಿ ಮುಂಬೈ, ಉದ್ಯಮಿ ಸುಧಾಕರ್ ಶೆಟ್ಟು ಮುಗರೋಡಿ, ಪುಣಿ ಬಂಟ್ಸ್ ಅಸೋಶಿಯೇಷನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು, ಕರ್ನಾಟಲಕ ರಾಜ್ಯ ಧಾರ್ಮಿಕ ಪರಿಷತ್ ಮಲ್ಲಿಕಾ ಪಕ್ಕಳ ಮಲಾರು, ಉದ್ಯಮಿ ಅಜಿತ್ ಚೌಟ ದೇವಸ್ಯ, ಉದ್ಯಮಿ ಅರವಿಂದ್ ಶೆಟ್ಟು ನಡುಮೊಗೆರುಗುತ್ತು, ಖ್ಯಾತ ವೈದ್ಯ ಶಿವಪ್ರಸಾದ್ ಶೆಟ್ಟಿ ಬಿ.ಸಿ.ರೋಡ್, ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಂದ್ರಪ್ರಕಾಶ್ ಶೆಟ್ಟಿ ತುಂಬೆಗುತ್ತು, ಉದ್ಯಮಿ ಸತೀಶ್ ಶೆಟ್ಟಿ ಮುಡಾರೆ, ಖ್ಯಾತ ವೈದ್ಯ ಸತ್ಯಶಂಕರ್ ಶೆಟ್ಟಿ ಬಿ.ಸಿ.ರೋಡ್,, ಉದ್ಯಮಿ ಧೀರಜ್ ನೈಕ್ ನಾರ್ಯನಡಿಗುತ್ತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಮಾಜಿ ಸಚಿವ ಬಿ. ರಮಾನಾಥ ರೈ (ರಾಜಕೀಯ), ಜಸ್ಟೀಸ್ ರಾಜೇಶ್ ರೈ, ಕಲ್ಲಂಗಳ (ಕಾನೂನು), ಡಾ| ಸತೀಶ್ ಭಂಡಾರಿ, ಬಾವಬೀಡು (ವೈದ್ಯಕೀಯ), ರವಿಶಂಕರ ಶೆಟ್ಟಿ, ಬಡಾಜೆಗುತ್ತು( ಧಾರ್ಮಿಕ), ಕರ್ನಲ್ ಜಗಜೀವನ್ ಭಂಡಾರಿ ಅಗರಿ (ಭಾರತೀಯ ಸೇನೆ), ವಿಠಲ ರೈ ಬಾಲಾಜಿಬೈಲು (ಸಾಮಾಜಿಕ), ಶೀನ ಶೆಟ್ಟಿ ವೀರಕಂಭ (ಕಂಬಳ), ರವಿ ಶೆಟ್ಟಿ ದೋಣಿಂಜೆಗುತ್ತು (ಉದ್ಯಮ), ಶ್ರೀಮತಿ ಸರಸ್ವತಿ ಜಿ. ರೈ ಬೋಳಂತೂರುಗುತ್ತು (ಸಮಾಜಸೇವೆ), ಕಾಂತಪ್ಪ ಶೆಟ್ಟಿ ಅಗರಿ (ನಾಟಿ ವೈದ್ಯ), ಮಹಾಬಲ ಶೆಟ್ಟಿ ಪಟ್ಲಗುತ್ತು (ಯಕ್ಷಗಾನ), ಜಯರಾಮ ರೈ ಮಲಾರು (ಸಾಹಿತ್ಯ), ಸುರೇಶ್ ರೈ, ಮಕರಜ್ಯೋತಿ (ಆರ್ಥಿಕ), ರವೀಂದ್ರ ಕಂಬಳಿ ಸುಜೀರುಬೀಡು (ಸಹಕಾರಿ), ಸಚ್ಚಿದಾನಂದ ಶೆಟ್ಟಿ, ಬೊಂಡಾಲ (ಶಿಕ್ಷಣ), ಸಿಎ ಯತೀಶ್ ಭಂಡಾರಿ ಬಿ.ಸಿ. ರೋಡ್ (ವೃತ್ತಿ), ಪ್ರದೀಪ್ ಆಳ್ವ ಅಜೆಕಲಗುತ್ತು(ರಂಗಭೂಮಿ), ಶ್ರೀನಾಥ್ ಶೆಟ್ಟಿ, ಮೊಡಂಕಾಪುಗುತ್ತು( ಆಧ್ಯಾತ್ಮ) ಶನಂದ ಶೆಟ್ಟಿ ಕಾಂಪ್ರಬೈಲು(ಕ್ರೀಡೆ) ಚೇತನ್ ರೈ ಮಾಣಿ( ಸಿನಿಮಾ) ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ‘ವಿಂಶತಿ’ ಸನ್ಮಾನ ನಡೆಯಲಿದೆ.

ಬಿ.ಸಿ. ರೋಡ್ ವಲಯ ಅಧ್ಯಕ್ಷ ದಿವಾಕರ್ ಶೆಟ್ಟಿ, ಪರಂಗಿಪೇಟೆ ವಲಯ ಅಧ್ಯಕ್ಷ ದೇವದಾಸ್ ಶೆಟ್ಟಿ, ಬೆಳ್ಳೂರು ವಲಯ ಅಧ್ಯಕ್ಷ ಜನಾರ್ದನ ಶೆಟ್ಟಿ, ಇರಾ ವಲಯ ಅಧ್ಯಕ್ಷ ಜಗದೀಶ್ ಶೆಟ್ಟಿ, ಮುಡಿಪು ವಲಯ ಅಧ್ಯಕ್ಷ ಜಯಂತ್ ಶೆಟ್ಟಿ, ಸಿದ್ದಕಟ್ಟೆ ವಲಯ ಅಧ್ಯಕ್ಷ ಸಂದೇಶ್ ಶೆಟ್ಟಿ, ವಾಮದಪದವು ವಲಯ ಅಧ್ಯಕ್ಷ ವಸಂತ ಶೆಟ್ಟಿ,ಕಾವಳಕಟ್ಟೆ ವಲಯ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಮಾಣಿ ವಲಯ ಅಧ್ಯಕ್ಷ ಮಾಧವ ರೈ, ಸಜೀಪ ವಲಯ ಅಧ್ಯಕ್ಷ ಸುರೇಶ್ ಶೆಟ್ಟಿ, ಕಲ್ಲಡ್ಕ ವಲಯ ಅಧ್ಯಕ್ಷ ಪದ್ಮನಾಭ ರೈ, ವಿಟ್ಲ ವಲಯ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಸಾಲೆತ್ತೂರು ವಲಯ ಅಧ್ಯಕ್ಷ ದೇವಪ್ಪ ಶೇಖ, ಅರಳ ವಲಯ ಅಧ್ಯಕ್ಷ ಸುಕುಮಾರ್ ಶೆಟ್ಟಿ, ಸರಪಾಡಿ ವಲಯ ಪ್ರವೀಣ್ ಶೆಟ್ಟಿ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರುವರು.
ಸಂಜೆ 7:00ರಿಂದ ಬಂಟರ ಸಂಘ ಬಂಟವಾಳ ತಾಲೂಕು ಮಹಿಳಾ ವಿಭಾಗದಿಂದ ’ತುಳುನಾಡ ಪರ್ಬೊದ ಪೊರ್ಲು, ತಿರ್ಲ್ ’ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ 8:00ಕ್ಕೆ ಬಂಟರ ಸಂಘ ಬಂಟವಾಳ ತಾಲೂಕು ಬಂಟ ಕಲಾವಿದರಿಂದ ’ಕೋರ್ದಬ್ಬು ತನ್ನಿಮಾನಿಗ’ ಎಂಬ ತುಳು ಜಾನಪದ ನಾಟಕ ನಡೆಯಲಿದೆ.

ದಿನಾಂಕ: 25-5-2025ನೇ ಬೆಳಿಗ್ಗೆ 9:30ರಿಂದ 10:30 ರವರೆಗೆ ಆದಿತ್ಯವಾರ 8, 9, ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮ ನಡೆಯಲಿದೆ. ಆಳ್ವಾಸ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟರ ಸಂಘ ಬಂಟವಾಳ ತಾಲೂಕು (ರಿ.) ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಅಗ್ರಜ ಡೆವಲಪರ್‍ಸ್ ಮಂಗಳೂರು ಸಂದೇಶ್ ಶೆಟ್ಟಿ ನುಳಿಯಾಲುಗುತ್ತು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬಳಿಕ ಪಿಯುಸಿ ವಿದ್ಯಾರ್ಥಿಗಳಿ ವೃತ್ತಿಪರ ಮಾರ್ಗದರ್ಶನ ನಡೆಯಲಿದೆ. ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಅಧ್ಯಕ್ಷ ಡಾ| ಮಂಜುನಾಥ್ ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟರ ಸಂಘ ಬಂಟವಾಳ ತಾಲೂಕು(ರಿ.) ಉಪಾಧ್ಯಕ್ಷ ಡಾ| ಪ್ರಶಾಂತ್ ಮಾರ್ಲ, ಬಂಟ್ಸ್ ವೆಲ್‌ಫೇರ್ ಟ್ರಸ್ಟ್(ರಿ.) ದೇವಿಕಿರಣ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಜೌದ್ಯೋಗಿಕ ಮಾರ್ಗದರ್ಶನ ನಡೆಯಲಿದೆ. ಅಡ್ಯಾರ್ ಗಾರ್ಡನ್ ಮಾಲಕ ಕಿಶನ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟರ ಸಂಘ ಬಂಟವಾಳ ತಾಲೂಕು (ರಿ.) ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಮಂಗಳೂರು ಉದ್ಯಮಿ ಮಾಧವ ನಾಯ್ಕ ಅಡ್ಯಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ರಾಜೀವ ಶೆಟ್ಟಿ ಎಡ್ತೂರು ಸಾಮಾಜಿಕ ಉಪನ್ಯಾನದ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟರ ಸಂಘ ಬಂಟವಾಳ ತಾಲೂಕು (ರಿ.) ಜೊತೆ-ಕೋಶಾಧಿಕಾರಿ, ಹುಬ್ಬಳ್ಳಿ ಉದ್ಯಮಿ ಪ್ರದೀಪ್ ಪಕ್ಕಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಬೆಳಿಗ್ಗೆ 11:00 ರಿಂದ ನಡೆಯುವ ವಿಂಶತಿ ಗೌರವ ಕಾರ್ಯಕ್ರಮದಲ್ಲಿ ಬಂಟರ ಸಂಘ ಬಂಟವಾಳ ತಾಲೂಕು (ರಿ.) ನಿಕಟಪೂರ್ವ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ನಿಟ್ಟೆ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ| ವಿನಯ್ ಹೆಗ್ಡೆಎ, ಲಕ್ಷ್ಮೀ ಮೆಮೋರಿಯಲ್ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ|ಎ.ಜೆ ಶೆಟ್ಟಿ, ಶ್ರೀ ದೇವಿ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ| ಎ.ಸದಾನಂದ ಶೆಟ್ಟಿ, ಎಂ.ಆರ್.ಜಿ.ಗ್ರೂಪ್ ಅದ್ಯಕ್ಷ ಡಾ| ಪ್ರಕಾಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.
ಮಧ್ಯಾಹ್ನ 2:00ರಿಮದ ದಕ್ಷಿಣ ಕನ್ನಡ ಜಿಲ್ಲಾ ಬಂಟರ ಸಂಘಗಳಿಂದ ’ನೃತ್ಯ ಸ್ಪರ್ಧೆ ನಡೆಯಲಿದೆ. ಯಕ್ಷದ್ರುವ ಪಟ್ಲ ಫೌಂಡೇಷನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟು ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಬಂಟರ ಸಂಘ ಬಂಟವಾಳ ತಾಲೂಕು (ರಿ.) ಜೊತೆ ಕಾರ್ಯದರ್ಶಿ ರಂಜನ್ ಕುಮಾರ್ ಶೆಟ್ಟಿ ಅರಳ ಅಧ್ಯಕ್ಷತೆ ವಹಿಸಲಿದ್ದಾರೆ. ಜನನಿ ಕನ್ಸ್‌ಸ್ಟ್ರಕ್ಷನ್ಸ್ ಸುಧಾಕರ ಪೂಂಜ ಮುಖ್ಯ ಅತಿಥಿಯಾಗು ಉಪಸ್ಥಿತರಿರುವರು.

ಸಂಜೆ 5:00 ರಿಂದ ನಡೆಯುವ ವಿಂಶತಿ ಸಂಭ್ರಮದ ಸಮಾರೋಪ ಸಮಾರಂಭವನ್ನು ಮಿಂಬಯಿ ಹೇರಂಭ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಕೂಳೂರು ಕನ್ಯಾನ ಡಾ| ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಬಂಟರ ಸಂಘ ಬಂಟವಾಳ ತಾಲೂಕು (ರಿ.) ಮಾಜಿ ಅಧ್ಯಕ್ಷ ಲ|. ಲೋಕನಾಥ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮುಂಬೈ ಬಂಟರ ಸಂಘ ಅಧ್ಯಕ್ಷ ಪ್ರವೀಣ್ ಬಿ. ಶೆಟ್ಟಿ, ಎಲ್ಲೂರು ಮಲ್ಲಬೆಟ್ಟು, ಪುಣೆ ಬಂಟರ ಸಂಘ ಅಧ್ಯಕ್ಷ ಸಂತೋಷ್ ವಿ. ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು, ಉದ್ಯಮಿ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಮಂಗಳೂರು ತಾಲೂಕು ಬಂಟರ ಸಂಘ ಅಧ್ಯಕ್ಷ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಜಾಗತಿಕ ಬಂಟರ ಸಂಘ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಉದ್ಯಮಿ ಎಂ.ಸಿ.ಆರ್. ಶೆಟ್ಟಿ, ಮುಂಡಾಜೆಗುತ್ತು, ಉದ್ಯಮಿ ರವೀಂದ್ರನಾಥ ಭಂಡಾರಿ ಪುಣ್ಕೆಮಜಲು, ಖ್ಯಾತ ವಕೀಲ ಅಶ್ವನಿ ಕುಮಾರ್ ರೈ, ಬಿ.ಸಿ.ರೋಡ್, ಉದ್ಯಮಿ ಪ್ರಸನ್ನ ಶಂಕರ ಶೆಟ್ಟಿ ಹುಬ್ಬಳ್ಳಿ, ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ ನಡುಗುದ್ರಿ, ಉದ್ಯಮಿ ಹರ್ಷ ಮೇಲಾಂಟ ಮೈಸೂರು, ಉದ್ಯಮಿ ಸುಧಾಕರ್ ಶೆಟ್ಟಿ ಸುಗ್ಗಿ, ಖ್ಯಾತ ದಂತ ತಜ್ಞ ಡಾ| ರಾಜಮೋಹನ್ ಶೆಟ್ಟಿ ಬಿ.ಸಿ.ರೋಡ್, ಉದ್ಯಮಿ ಸಂತೋಷ್ ಶೆಟ್ಟಿ ನುಳಿಯಾಲುಗುತ್ತು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಪುತ್ತೂರು ಬಂಟರ ಸಂಘ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಬೆಳ್ತಂಗಡಿ ಬಂಟರ ಸಂಘ ಅಧ್ಯಕ್ಷ ಜಯಂತ್ ಶೆಟ್ಟಿ, , ಸುಳ್ಯ ಅಧ್ಯಕ್ಷಬಂಟರ ಸಂಘ ಜಯಪ್ರಕಾಶ್ ರೈ, ಮೂಡಬಿದ್ರೆ ಬಂಟರ ಸಂಘ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಕೋಡಿಕಲ್ ಬಂಟರ ಸಂಘ ಅಧ್ಯಕ್ಷ ಮಹಾಬಲ ಚೌಟ, ಜೆಪ್ಪು ಬಂಟರ ಸಂಘ ಅಧ್ಯಕ್ಷ ವಸಂತ ಶೆಟ್ಟಿ, ಬಜ್ಜೆ ಬಂಟರ ಸಂಘ ಅಧ್ಯಕ್ಷ ಬಾಬು ಶೆಟ್ಟಿ, ಎಕ್ಕಾರು ಬಂಟರ ಸಂಘ ಅಧ್ಯಕ್ಷ ರತ್ನಾಕರ್ ಶೆಟ್ಟಿ, ಸುರತ್ಕಲ್ ಬಂಟರ ಸಂಘ ಅಧ್ಯಕ್ಷ ಲೋಕಯ್ಯ ಶೆಟ್ಟಿ, ಕಾವೂರು ಬಂಟರ ಸಂಘ ಅಧ್ಯಕ್ಷ ಆನಂದ ಶೆಟ್ಟಿ, ಅಶೋಕ್ ನಗರ ಬಂಟರ ಸಂಘ ಅಧ್ಯಕ್ಷ ರವಿಚಂದ್ರ ಶೆಟ್ಟಿ, ಕಂಕನಾಡಿ ಬಂಟರ ಸಂಘ ಅಧ್ಯಕ್ಷ ಕಮಲಾಕ್ಷ ಶೆಟ್ಟಿ, ಮೂಲ್ಕಿ ಬಂಟರ ಸಂಘ ಅಧ್ಯಕ್ಷ ಅಶೋಕ್ ಶೆಟ್ಟಿ, ನೀರ್ ಮಾರ್ಗ ಬಂಟರ ಸಂಘ ಅಧ್ಯಕ್ಷ ಸತೀಶ್ ಶೆಟ್ಟಿ, ಮಹಿಳಾ ವಿಭಾಗ ಮೂಡಬಿದ್ರೆ ಅಧ್ಯಕ್ಷ ಶೋಭಾ ಹೆಗ್ಡೆ, ಉಳ್ಳಾಲ ಬಂಟರ ಸಂಘ ಅಧ್ಯಕ್ಷ ಸುರೇಶ್ ಚೌಟ, ಜೆಪ್ಪಿನಮೊಗರು ಬಂಟರ ಸಂಘ ಅಧ್ಯಕ್ಷ ಸತ್ಯಪ್ರಸಾದ್ ಶೆಟ್ಟಿ, ಬಿಜೈ ಬಂಟರ ಸಂಘ ಅಧ್ಯಕ್ಷ ಕೃಷ್ಣಮೂರ್ತಿ ರೈ, ಗುರುಪುರ ಬಂಟರ ಸಂಘ ಅಧ್ಯಕ್ಷ ಸಂತೋಷ್ ಶೆಟ್ಟಿ ಗೌರವ ಉಪಸ್ಥಿತರಿರುವರು.
ರಾತ್ರಿ 7:00 ರಿಂದ ಬಂಟರ ಸಂಘ ಬಂಟವಾಳ ತಾಲೂಕು ಯುವ ವಿಭಾಗದಿಂದ ಗಾನ-ನೃತ್ಯ-ಆಹಾರ ಮೇಳಗಳ “ಯುವೋಚ್ಛಯ” ಕಾರ್ಯಕ್ರಮ ನಡೆಯಲಿದೆ.
ವಿಶೇಷ ಸೂಚನೆ:
*ಶೈಕ್ಷಣಿಕ, ವೃತ್ತಿಪರ ಹಾಗೂ ಔದ್ಯೋಗಿಕ ಮಾರ್ಗದರ್ಶನದ ಸದುಪಯೋಗ ಪಡೆಯುವ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಸಮಯಕ್ಕೆ ಸರಿಯಾಗಿ ತಮ್ಮ ವಿಭಾಗಗಳಿಗನುಸಾರವಾಗಿ ಸೂಚಿಸಿದ ಸಭಾಂಗಣಗಳಲ್ಲಿ 30 ನಿಮಿಷ ಮುಂಚಿತವಾಗಿ ಆಸೀನರಾಗಿರತಕ್ಕದ್ದು.
*ತಮ್ಮ ಮನೆಯ ಒಬ್ಬರ ಹೆಸರಿನಲ್ಲಿ ಮಾತ್ರ ಆಮಂತ್ರಣ ಪತ್ರಿಕೆಯನ್ನು ನೀಡಿದ್ದೇವೆಯಾದರೂ ಇದು ತಮ್ಮ ಮನೆಯ ಎಲ್ಲಾ ಬಂಧುಗಳಿಗೆ ನೀಡಿದ ಆಮಂತ್ರಣವೆಂದು ಸ್ವೀಕರಿಸಿ ಸಕುಂಟುಚಿಕರಾಗಿ ಆಗಮಿಸಬೇಕಾಗಿ ವಿನಂತಿ.
*ಸಮಯಕ್ಕನುಗುಣವಾಗಿ ಉಟೋಪಚಾರದ ವ್ಯವಸ್ಥೆ ಇದ್ದು ಸಮಾರಂಭದ ಎರಡೂ ದಿನಗಳಲ್ಲೂ ತಾವೆಲ್ಲಾ ನಮ್ಮೊಂದಿಗಿರಬೇಕು.









