Saturday, April 27, 2024
spot_imgspot_img
spot_imgspot_img

ಬಂಟ್ವಾಳ: ದಿನಸಿ ಮತ್ತು ಡ್ರೆಸ್ & ಫ್ಯಾನ್ಸಿ ಅಂಗಡಿಯಲ್ಲಿ ಕಳ್ಳತನ – ನಗದು ಸಹಿತ ಇತರ ಸ್ವತ್ತು ಕಳವು

- Advertisement -G L Acharya panikkar
- Advertisement -

ಬಂಟ್ವಾಳ: ದಿನಸಿ ಮತ್ತು ಡ್ರೆಸ್ & ಫ್ಯಾನ್ಸಿ ಅಂಗಡಿಗೆ ನುಗ್ಗಿದ ಕಳ್ಳರು ನಗದು ಸಹಿತ ಇತರ ಸ್ವತ್ತುಗಳನ್ನು ಕಳವು ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಬೆಂಜನಪದವು ಎಂಬಲ್ಲಿ ನಡೆದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಬೆಂಜನಪದವು ಎಂಬಲ್ಲಿರುವ ಅಲ್ಬರ್ಟ್ ಫೆರ್ನಾಂಡೀಸ್ ಬಿಲ್ಡಿಂಗ್ ನಲ್ಲಿ ಕಾರ್ಯಚರಿಸುತ್ತಿರುವ ರಾಜೇಶ್ವರಿ ದಿನಸಿ ಅಂಗಡಿ ಮತ್ತು ರಾಜರಾಜೇಶ್ವರಿ ಡ್ರೆಸ್ & ಫ್ಯಾನ್ಸಿ ಅಂಗಡಿಗೆ ಕಳ್ಳರು ನುಗ್ಗಿದ್ದಾರೆ. ಜು.22 ರಂದು ಅಂ‌ಗಡಿ ಮಾಲಕಿ ರಾತ್ರಿ 8 ಗಂಟೆಗೆ ಅಂಗಡಿ ಬಂದ್ ಮಾಡಿ ಹೋಗಿದ್ದಾರೆ. ಮರುದಿನ ಬೆಳಿಗ್ಗೆ 6 ಗಂಟೆಗೆ ಪರಿಚಯದ ವಸಂತರವರು ಕರೆ ಮಾಡಿ ಅಂಗಡಿಯ ಶಟರ್ ಅರ್ಧ ತೆರೆದಿರುವ ಬಗ್ಗೆ ಮಾಹಿತಿ ನೀಡಿದ್ದು, ಕೂಡಲೇ ತನ್ನ ಮಗಳೊಂದಿಗೆ ಅಂಗಡಿಗೆ ಬಂದು ನೋಡಿದಾಗ ಅಂಗಡಿಯಲ್ಲಿ ಕಳವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ರಾಜರಾಜೇಶ್ವರಿ ದಿನಸಿ ಅಂಗಡಿಯ ಶಟರ್ ನ್ನು ಕಬ್ಬಿಣದ ಸಾಧನದಿಂದ ಮೇಲಕ್ಕೆತ್ತಿ ಅಂಗಡಿಯ ಒಳಗಿದ್ದ ಬಿಸ್ಕಿಟ್ ಪ್ಯಾಕೇಟ್‌, ಸಿಗರೇಟ್ ಪ್ಯಾಕೇಟ್‌, ಕ್ಯಾಶ್ ಡ್ರಾವರ್ ನ ಬೀಗವನ್ನು ಮುರಿದು ಅದರಲ್ಲಿದ್ದ ನಗದು 1500ರೂ ಕಳವು ಮಾಡಿದ್ದಾರೆ.

ರಾಜರಾಜೇಶ್ವರಿ ಡ್ರೆಸ್ & ಫ್ಯಾನ್ಸಿ ಸ್ಟೋರ್ ನ ಶಟರಿನ ಬೀಗ ಮುರಿದು ಅದರೊಳಗಿದ್ದ ಸುಮಾರು 10,000 ರೂಪಾಯಿ ಮೌಲ್ಯದ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್, 5000ರೂ. ಮೌಲ್ಯದ ಚಪ್ಪಲಿ ಹಾಗೂ ಕ್ಯಾಶ್ ಡ್ರಾವರ್ ನಲ್ಲಿದ್ದ ನಗದು 3500 ರೂ ಸ್ಟೀಲ್ ಕಾಣಿಕೆ ಡಬ್ಬದಲ್ಲಿದ್ದ ನಗದು 10,000 ರೂಪಾಯಿಗಳನ್ನು ಕಳವು ಮಾಡಿದ ಬಳಿಕ ಬಿಲ್ಡಿಂಗ್ ನ ಸ್ಟಾಕ್ ರೂಮ್ ನ ಅಂಗಡಿಯ ಶಟರಿನ ಬೀಗ ಮುರಿದು ಒಂದು ಪೈಂಟ್ ಡಬ್ಬಿಯನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

ಒಟ್ಟು 15,000 ರೂ. ಹಾಗೂ ಇತರ ಸಾಮಾಗ್ರಿಗಳ ಅಂದಾಜು ಮೊತ್ತ 18,500ರೂ. ಕಳವು ಮಾಡಿದ್ದು ಕಳವಾದ ಎಲ್ಲಾ ಸ್ವತ್ತುಗಳ ಅಂದಾಜು 33,500 ರೂ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!