Saturday, June 20, 2026
spot_imgspot_img
spot_imgspot_img

ಬಂಟ್ವಾಳ : ಒಂದು ತಿಂಗಳ ಹಿಂದೆ ಬಿ.ಸಿ. ರೋಡಿನಲ್ಲಿ ಕಳವಾದ ಬೈಕ್ ರಾಮನಗರದಲ್ಲಿ ಪತ್ತೆ; ಆರೋಪಿ ಪೊಲೀಸ್‌ ವಶ

- Advertisement -
- Advertisement -

ಬಂಟ್ವಾಳ: ಬಿ.ಸಿ. ರೋಡಿನಲ್ಲಿ ಕಳೆದ ಒಂದು ತಿಂಗಳ ಹಿಂದೆ ಕಳವಾಗಿದ್ದ ಬೈಕ್ ರಾಮನಗರದಲ್ಲಿ ಪತ್ತೆಯಾಗಿದ್ದು, ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರಾಮನಗರದ ಬಿಡದಿ ತಾನ ಬಾಣಂದೂರು ನಿವಾಸಿ ರಾಜು ಕೆ. ಬಂಧಿತ ಆರೋಪಿ.

ಬಿ.ಸಿ. ರೋಡು ನಿವಾಸಿ ಪವನ್ ಅವರು ಜೂ. 26ರಂದು ಬೈಕನ್ನು ನಿಲ್ಲಿಸಿ ಕೀಯನ್ನು ಅದರಲ್ಲೇ ಬಿಟ್ಟು ಹೊಟೇಲೊಂದಕ್ಕೆ ತೆರಳಿದ್ದರು. ಅದೇ ಸಮಯದಲ್ಲಿ ಹೊಟೇಲ್‌ನಿಂದ ಹೊರಬರುತ್ತಿದ್ದ ಆರೋಪಿ ರಾಜು, ಬೈಕ್ ನಿಲ್ಲಿಸುವುದನ್ನು ಗಮನಿಸಿ ಬೈಕನ್ನು ಚಲಾಯಿಸಿಕೊಂಡು ನೇರವಾಗಿ ಊರಿಗೆ ತೆರಳಿದ್ದಾನೆ.

ಲಾರಿ ಚಾಲಕನಾಗಿದ್ದ ರಾಜು ಬೈಕ್ ಕಳವುಗೈದಿದ್ದು ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ಅದರ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್‌ಸ್ಪೆಕ್ಟರ್ ಆನಂತಪದ್ಮನಾಭ ಅವರ ತಂಡ ರಾಮನಗರಕ್ಕೆ ತೆರಳಿ ಬೈಕ್ ಸಹಿತ ಆರೋಪಿಯನ್ನು ಕರೆದುಕೊಂಡು ಬಂದು ಬೈಕನ್ನು ವಾರಿಸುದಾರರಿಗೆ ಹಸ್ತಾಂತರಿಸಿದ್ದಾರೆ.

- Advertisement -

Related news

error: Content is protected !!