Saturday, June 28, 2025
spot_imgspot_img
spot_imgspot_img

ಬಂಟ್ವಾಳ: ನಿಲ್ಲಿಸಿದ್ದ ಲಾರಿ ಮುಂದಕ್ಕೆ ಚಲಿಸಿ ಕಾರಿಗೆ ಢಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ಇಬ್ಬರಿಗೆ ಢಿಕ್ಕಿ

- Advertisement -
- Advertisement -

ಬಂಟ್ವಾಳ: ನಿಲ್ಲಿಸಿದ್ದ ಲಾರಿಯೊಂದು ಮುಂದೆ ಹೋಗಿ ಕಾರಿಗೆ ಢಿಕ್ಕಿಯಾಗಿದ್ದಲ್ಲದೆ ಬಸ್ ಕಾಯುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದ ಘಟನೆ ಮೆಲ್ಕಾರ್ ಎಂಬಲ್ಲಿ ನಡೆದಿದೆ.

ಹಜ್ರಾ ಶಾಮ (20) ಹಾಗೂ ಖತೀಜಾತುಲ್ ಆಫಿಯಾ(18) ಗಾಯಗೊಂಡವರು. ಕೆ.ಎನ್.ಆರ್.ಸಿ.ಕಂಪೆನಿಗೆ ಸೇರಿದ ಲಾರಿಯೊಂದು ಮೆಲ್ಕಾರ್ ನಲ್ಲಿ ಅಪಘಾತಕ್ಕೀಡಾಗಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ‌ ಮೆಲ್ಕಾರ್ ಎಂಬಲ್ಲಿ ‌ ಸರ್ವೀಸ್ ರಸ್ತೆಯಲ್ಲಿ ಮಧ್ಯಾಹ್ನ ಕೆ.ಎನ್.ಆರ್.ಸಿ.ಕಂಪೆನಿಗೆ ಸೇರಿದ ಲಾರಿಯ ಚಾಲಕ ರಸ್ತೆಯಲ್ಲಿ ‌ಲಾರಿ ನಿಲ್ಲಿಸಿ ಅಂಗಡಿಗೆ ಹೋಗಿದ್ದ.

ಆದರೆ ಹ್ಯಾಂಡ್ ಬ್ರೇಕ್ ‌ಹಾಕದ ಕಾರಣ ಲಾರಿ ಮುಂದೆ ಚಲಿಸಿದ್ದು , ಅಲ್ಲಿಯೇ ಇದ್ದ ಒಮ್ನಿ ಕಾರಿಗೆ ಡಿಕ್ಕಿ ಹೊಡೆದಿದೆ, ಬಳಿಕ ಮುಂದೆ ಸಾಗಿದ ಲಾರಿ ಬಸ್ ಗಾಗಿ ಕಾಯುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಗೆ ವಾಲಿ ನಿಂತಿದೆ. ಡಿಕ್ಕಿಹೊಡೆದ ಪರಿಣಾಮ ಅವರಿಬ್ಬರೂ ರಸ್ತೆ ಬದಿಯಲ್ಲಿರುವ ನೀರು ಹೋಗುವ ಸಣ್ಣ ಕಣಿಗೆ ಬಿದ್ದಿದ್ದಾರೆ. ಇಬ್ಬರಿಗೂ ಗಾಯವಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಆನಂದ ಪಾಸ್ವಾನ್ ರವರ ನಿರ್ಲಕ್ಷ್ಯ ತನವೇ ಕಾರಣ ಎಂದು ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!