Saturday, May 18, 2024
spot_imgspot_img
spot_imgspot_img

ಮಂಗಳೂರು: ಬಾಲಕನಿದ್ದ ಕಾರು ಟೋಯಿಂಗ್‌ ಘಟನೆ-2 ಪ್ರಕರಣಗಳನ್ನು ದಾಖಲಿಸಿದ ಪೊಲೀಸರು !!

- Advertisement -G L Acharya panikkar
- Advertisement -

ಮಂಗಳೂರು: ವರ್ಷದ ಬಾಲಕ ಕಾರಿನ ಒಳಗೆ ಇರುವಾಗಲೇ ಟ್ರಾಫಿಕ್ ಪೊಲೀಸರು ಕಾರನ್ನು ಟೋಯಿಂಗ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಟ್ರಾಫಿಕ್ ಪೊಲೀಸರು ಎರಡು ದಿನಗಳ ನಂತರ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು ಈ ವೇಳೆ ಕಾರು ಫುಟ್‌ಪಾತ್‌ನಲ್ಲಿ ನಿಲ್ಲಿಸಲಾಗಿತ್ತು ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಮಿಜಾರಿನ ಮಹಿಳೆಯೊಬ್ಬರು ಗುರುವಾರ ಸಂಜೆ ತಮ್ಮ ಕಾರಿನಲ್ಲಿ ನಗರದ ಮಲ್ಲಿಕಟ್ಟೆಗೆ ಚಾಲಕ ಮತ್ತು ಇಬ್ಬರು ಮಕ್ಕಳೊಂದಿಗೆ ಬಂದಿದ್ದರು. ಈ ವೇಳೆ ಕಾರನ್ನು ಅಲ್ಲಿನ ವಸತಿ ಸಮುಚ್ಚಯದ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಓರ್ವ ಮಗನನ್ನು ಕಾರಿನಲ್ಲೇ ಕುಳಿರಿಸಿ ಓರ್ವ ಮಗನೊಂದಿಗೆ ಅವರು ಹತ್ತಿರದ ಅಂಗಡಿಯೊಂದಕ್ಕೆ ಹೋಗಿದ್ದರು. ಈ ಸಂದರ್ಭ ಚಾಲಕ ಮತ್ತು ಏಳು ವರ್ಷದ ಹುಡುಗ ಕಾರಿನೊಳಗೆ ಇದ್ದರು. ಮಹಿಳೆ ತನ್ನ ಮೊಬೈಲ್‌ ಫೋನ್‌ನ್ನು ಕಾರಿನೊಳಗೆ ಬಿಟ್ಟು ಹೋಗಿದ್ದನ್ನು ಗಮನಿಸಿದ ಚಾಲಕ ಅದನ್ನು ಅವರಿಗೆ ನೀಡಲು ಕಾರಿನಿಂದ ಇಳಿದು ಹೋಗಿದ್ದರು. ಏತನ್ಮಧ್ಯೆ ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ವಾಹನವನ್ನು ಟೋಯಿಂಗ್‌ ಮಾಡಿದ್ದಾರೆ.

ಕಾರನ್ನು ಎಳೆದೊಯ್ಯುವ ಮುನ್ನ ಪೊಲೀಸರು ಕಾರನ್ನು ಪರಿಶೀಲಿಸಿದರು. ಈ ಸಂದರ್ಭ ಕಾರಿನ ಕಿಟಕಿಗಳು ಬಣ್ಣದ್ದಾಗಿದ್ದವು ಹಾಗೂ ಅದನ್ನು ಲಾಕ್‌ ಮಾಡಲಾಗಿತ್ತು. ಈ ಕಾರಣದಿಂದ ಕಾರಿನೊಳಗೆ ಬಾಲಕ ಇರುವುದು ತಿಳಿದು ಬಂದಿಲ್ಲ. ಬಳಿಕ ಕಾರನ್ನು ಕದ್ರಿ ಸಂಚಾರ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಯಿತು. ಆಗ ಪೊಲೀಸರು ಕಾರಿನಲ್ಲಿ ಬಾಲಕ ಇರುವುದನ್ನು ಗಮನಸಿದ್ದರು.

ಇನ್ನು ಈ ಘಟನೆಯ ಬಗ್ಗೆ ಶಾಸಕ ವೇದವ್ಯಾಸ್‌ ಕಾಮತ್‌ ಅವರು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ. ಯಾವುದೇ ವಾಹನಗಳನ್ನು ಟೋಯಿಂಗ್ ಮಾಡುವ ಮುನ್ನ ಪೊಲೀಸರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಸಕ ಸೂಚಿಸಿದರು.

ಇನ್ನು ಮಹಿಳೆ ಕಾರನ್ನು ಫುಟ್‌ಪಾತ್‌ನಲ್ಲಿ ನಿಲ್ಲಿಸಿಲ್ಲ ಎಂದು ವಾದಿಸಿದ್ದರು. ಆದರೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಪೋಟೋವನ್ನು ಪರಿಶೀಲಿಸಿದಾಗ ಕಾರು ಫುಟ್‌ಪಾತ್‌ನಲ್ಲಿ ಇದ್ದದ್ದು ದೃಢಪಟ್ಟಿದ್ದು ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಕಾರನ್ನು ಫುಟ್‌ಪಾತ್‌ನಲ್ಲಿ ನಿಲ್ಲಿಸಿದ್ದಕ್ಕಾಗಿ ಹಾಗೂ ಕಾರಿನ ಕಿಟಿಕಿಗೆ ಬಣ್ಣದ ಗಾಜು ಅಳವಡಿಸಿದ್ದರ ವಿರುದ್ದ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ.

- Advertisement -

Related news

error: Content is protected !!