Monday, June 8, 2026
spot_imgspot_img
spot_imgspot_img

ಬಂಟ್ವಾಳ: ಮನೆಯ ಮಹಡಿ ಮೇಲಿನಿಂದ ಬಿದ್ದು ವ್ಯಕ್ತಿ ಮೃತ್ಯು

- Advertisement -
- Advertisement -
vtv vitla

ಬಂಟ್ವಾಳ: ಮನೆಯ ಮಹಡಿ ಮೇಲಿನಿಂದ ಆಕಸ್ಮಿವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ನಡೆದಿದೆ.

ಗಡಿಯಾರ ಸಮೀಪದ ಬಾನಗುಂಡಿ ನಿವಾಸಿ ಆಟೋ ರಿಕ್ಷಾ ಚಾಲಕ ಕಾಂತಪ್ಪ ಮೂಲ್ಯ ಮೃತಪಟ್ಟವರು.

ಕಾಂತಪ್ಪ ಮೂಲ್ಯ ಅವರು ಹೊಸ ಮನೆ ನಿರ್ಮಾಣ ಮಾಡುತ್ತಿದ್ದು, ಮನೆಯ ಮಹಡಿ ಮೇಲೆ ಹೋಗಿದ್ದ ಅವರು ಆಕಸ್ಮಿಕ ವಾಗಿ ಕಾಲು ಜಾರಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು‌. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಸ್ಥಳದಲ್ಲಿಯೇ ಮೃತಪಟ್ಟಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಮೃತರ ಗೌರವಾರ್ಥ ಗಡಿಯಾರ ಪಾರ್ಕಿನ ಎಲ್ಲಾ ಆಟೋ ಚಾಲಕರು ಬಾಡಿಗೆ ನಡೆಸದೆ ಸಂತಾಪ ಸೂಚಿಸಿದರು. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

- Advertisement -

Related news

error: Content is protected !!