Thursday, September 12, 2024
spot_imgspot_img
spot_imgspot_img

ಬಂಟ್ವಾಳ: ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದ ಹೆಬ್ಬಾವು; ಶಸ್ತ್ರಚಿಕಿತ್ಸೆ ಬಳಿಕ ಕಾಡಿಗೆ ಬಿಟ್ಟ ಉರಗಪ್ರೇಮಿ..!!

- Advertisement -G L Acharya panikkar
- Advertisement -

ಬಂಟ್ವಾಳ: ಮಲಬದ್ಧತೆ ಸಮಸ್ಯೆಯಿಂದ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ ಹೆಬ್ಬಾವೊಂದನ್ನು ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಗುಣಮುಖವಾದ ನಂತರ ಮತ್ತೆ ಕಾಡಿಗೆ ಬಿಟ್ಟ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉರಗಪ್ರೇಮಿ ಧೀರಜ್ ನಾವೂರು ವೈದ್ಯರ ಸಹಾಯದಿಂದ ರಕ್ಷಿಸಿ ಮತ್ತೆ ಕಾಡಿಗೆ ಸೇರಿಸಿದ್ದಾರೆ.

ಬಂಟ್ವಾಳದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಹೆಬ್ಬಾವೊಂದು ಇರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಉರಗಪ್ರೇಮಿ ಧೀರಜ್ ನಾವೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಹೆಬ್ಬಾವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಮಲಗಿದ್ದಲ್ಲಿಂದ ಏಳದೇ ಇರುವುದನ್ನುಕಂಡು ತಕ್ಷಣ ತನ್ನ ಬೈಕಿನಲ್ಲೇ ಹೆಬ್ಬಾವನ್ನು ಮಂಗಳೂರಿನ ಲಿಟಿಲ್ ಪಾವ್ಸ್ ಪಶು ವೈದ್ಯಕೀಯ ಚಿಕಿತ್ಸಾಲಯಕ್ಕೆ ಸಾಗಿಸಿದ್ದಾರೆ. ಲಿಟಿಲ್ ಪಾವ್ಸ್ ವೈದ್ಯರಾದ ಡಾ. ಯಶಸ್ವಿ ನಾರಾವಿ ಹೆಬ್ಬಾವನ್ನು ಸೂಕ್ಷ್ಮವಾಗಿ ಪರೀಕ್ಷೆ ನಡೆಸಿದ ವೈದ್ಯರಿಗೆ ಹೆಬ್ಬಾವು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದೆ ಎನ್ನುವ ವಿಚಾರ ತಿಳಿದು ಬಂದಿದೆ.

ಹೆಬ್ಬಾವಿನ ಹೊಟ್ಟೆಯಿಂದ ಮಲಬದ್ಧತೆ ಗೆ ಕಾರಣವಾದ ವಸ್ತುಗಳನ್ನು ಹೊರ ತೆಗೆಯಲು ಮತ್ತು ಹಾವಿನ ಜೀರ್ಣಕ್ರಿಯೆ ಸ್ವಾಭಾವಿಕವಾಗಿ ನಡೆಯುವಂತೆ ಮಾಡಲು ಶಸ್ತ್ರಚಿಕಿತ್ಸೆಯೊಂದೇ ಮಾರ್ಗ ಎಂದು ಪರಿಗಣಿಸಿದ ಹೆಬ್ಬಾವಿಗೆ ಅನಸ್ತೇಸಿಯಾ ನೀಡಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆಯ ಮೊದಲು ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿ ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ಸಮಯದಲ್ಲಿ ಫ್ಲೀಯುಡ್, ಆಂಟಿ ಬಯೋಟಿಕ್ ನೀಡಿ ಹೆಬ್ಬಾವನ್ನು ಮತ್ತೆ ಓಡಾಡುವ ಸ್ಥಿತಿಗೆ ತಂದಿದ್ದಾರೆ. ಹೆಬ್ಬಾವನ್ನು ಧೀರಜ್ ಅದು‌ ಪತ್ತೆಯಾದ ಸ್ಥಳದಲ್ಲೇ ಮತ್ತೆ ಬಿಟ್ಟು ಬಂದಿದ್ದು, ಹೆಬ್ಬಾವು ಅರಾಮವಾಗಿ ಸಾಗಿ‌ ಕಾಡು ಸೇರಿಕೊಂಡಿದೆ.

- Advertisement -

Related news

error: Content is protected !!