Friday, May 3, 2024
spot_imgspot_img
spot_imgspot_img

ಬಂಟ್ವಾಳ: ಭೀಕರ ರಸ್ತೆ ಅಪಘಾತ; ಪುತ್ತೂರಿನ ವಿದ್ಯಾರ್ಥಿನಿ ಮೃತ್ಯು

- Advertisement -G L Acharya panikkar
- Advertisement -

ಬಂಟ್ವಾಳ: ತುಂಬೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ, ಪುತ್ತೂರಿನ ಕೂರ್ನಡ್ಕ ನಿವಾಸಿ ಹನಾ (19) ಮೃತಪಟ್ಟ ಘಟನೆ ನಡೆದಿದೆ.

ಕೂರ್ನಡ್ಕ ನಿವಾಸಿ ಅಬ್ದುಲ್ ಮಜೀದ್ ಹಾಗೂ ಶಮೀಮಾ ದಂಪತಿ ಪುತ್ರಿ ಹನಾ (19) ಮೃತಪಟ್ಟವರು. ಇವರು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ವಿದ್ಯಾರ್ಥಿನಿ. ಪುತ್ತೂರಿನಿಂದ ಮಂಗಳೂರು ಕಡೆಗೆ ಐ20 ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ‌.

ಚಾಲಕನ ನಿಯಂತ್ರಣ ತಪ್ಪಿದ ಕಾರು, ಪಲ್ಟಿಯಾಗಿ ಅಪಘಾತಕ್ಕೀಡಾಗಿದೆ. ಮೃತಪಟ್ಟ ಹನಾ ಅವರು ಕೂರ್ನಡ್ಕದ ಗಣೇಶ್ ಬೀಡಿ ಕಾಂಟ್ರಾಕ್ಟರ್ ಆಗಿರುವ ಸೀದಿಕುಂಞ ಹಾಜಿಯವರ ಮೊಮ್ಮಗಳು.

- Advertisement -

Related news

error: Content is protected !!