Tuesday, June 9, 2026
spot_imgspot_img
spot_imgspot_img

ಬಂಟ್ವಾಳ: ಅವಾಚ್ಯ ಶಬ್ದಗಳಿಂದ ಬೈದು ವ್ಯಕ್ತಿಗೆ ಬೆದರಿಕೆ..!

- Advertisement -
- Advertisement -

ಬಂಟ್ವಾಳ: ವ್ಯಕ್ತಿಯೋರ್ವರು ತನ್ನ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮೋಟಾರು ಸೈಕಲ್‌ ಸವಾರನೋರ್ವರ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವ ಘಟನೆ ಬೆಳ್ತಂಗಡಿ ತಾಲೂಕು, ಬಾರ್ಯ ಗ್ರಾಮದ, ಸೋಕಿಲ ಎಂಬಲ್ಲಿ ನಡೆದಿದೆ.

ಉಳಿ ಗ್ರಾಮ , ಬಂಟ್ವಾಳ ಪ್ರಶಾಂತ್‌ ಎಂಬವರ ದೂರಿನಂತೆ ತನ್ನ ಕಾರಿನಲ್ಲಿ ಬೆಳ್ತಂಗಡಿ ತಾಲೂಕು, ಬಾರ್ಯ ಗ್ರಾಮದ, ಸೋಕಿಲ ಎಂಬಲ್ಲಿ ತೆರಳುತ್ತಿದ್ದ ವೇಳೆ ಆರೋಪಿ ಪೂವಪ್ಪ ಗೌಡ ಮೋಟಾರು ಸೈಕಲನ್ನು ಪ್ರಶಾಂತ್‌ರವರ ಕಾರಿಗೆ ಅಡ್ಡವಾಗಿಟ್ಟು ಕಾರಿನ ಕಡೆಗೆ ಪೂವಪ್ಪ ಗೌಡ ಎಂಬವರ ಬಳಿ ಇದ್ದ ಬಂದೂಕನ್ನು ಗುರಿ ಇಟ್ಟು, ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾನೆ ಎಂಬುದಾಗಿ ದೂರು ನೀಡಿರುತ್ತಾರೆ.

- Advertisement -

Related news

error: Content is protected !!