Thursday, April 25, 2024
spot_imgspot_img
spot_imgspot_img

ವೇಶ್ಯಾವಾಟಿಕೆ ಅಡ್ಡಕ್ಕೆ ದಾಳಿ ಪ್ರಕರಣ – ಕಿಂಗ್ ಪಿನ್ ಕೇರಳಕ್ಕೆ ಪರಾರಿ..?

- Advertisement -G L Acharya panikkar
- Advertisement -

ವಿಟ್ಲ: ಬಿ.ಸಿ ರೋಡಿನಲ್ಲಿ ನಡೆದ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ಪ್ರಕರಣದ ಕಿಂಗ್ ಪಿನ್ ಕೆದ್ಕಾರ್ ಕರೀಂಗಾಗಿ ಪೊಲೀಸರ ವಿಶೇಷ ತಂಡ ತನಿಖೆ ನಡೆಸುತ್ತಿದ್ದು, ಈ ಮಧ್ಯೆ ಆತ ಕೇರಳಕ್ಕೆ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ.

ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಿ.ಸಿ ರೋಡ್ ಹೃದಯ ಭಾಗದಲ್ಲಿರುವ ಭಾರತ್ ಕಾಂಪ್ಲೆಕ್ಸ್ ನ ತಳಭಾಗದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡಕ್ಕೆ ದಾಳಿ ನಡೆಸಿದ್ದ ಪೊಲೀಸರು ಐವರು ಯುವತಿಯರನ್ನು ರಕ್ಷಿಸಿ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು.

ಪುತ್ತೂರಿನ ನೆಕ್ಕಿಲಾಡಿಯ 28 ವರ್ಷದ ಶರಣ್, ಚಿಕ್ಕಮುಡ್ನೂರಿನ 25 ವರ್ಷದ ಕಿಶನ್ ಮತ್ತು ಬಂಟ್ವಾಳ ತಾಲೂಕಿನ ಕರಿಯಂಗಳದ 28 ವರ್ಷದ ಭರತ್ ಆರೋಪಿಗಳು. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಮತ್ತಷ್ಟು ರೋಚಕ ಮಾಹಿತಿಗಳು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿದೆ.

ಭಾರತ್ ಕಾಂಪ್ಲೆಕ್ಸ್ ನ ತಳಭಾಗದಲ್ಲಿರುವ ಕೊಠಡಿಯೊಂದನ್ನು ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕೆದ್ಕಾರ್ ನಿವಾಸಿ ಈ ಹಿಂದೆ ಹಲವಾರು ಅಪರಾಧ ಕೃತ್ಯಗಳಲ್ಲಿ ಆರೋಪಿಯಾಗಿರುವ ಅಬ್ದುಲ್ ಕರೀಂ ಕೆದ್ಕಾರ್ ಎಂಬಾತ ಬಾಡಿಗೆಗೆ ಪಡೆದುಕೊಂಡಿದ್ದ ಎನ್ನಲಾಗಿದೆ.

ವಿಟ್ಲ ಠಾಣಾ ವ್ಯಾಪ್ತಿಯ ಖಂಡಿಗದಲ್ಲಿ ಈ ಹಿಂದೆ ಕಾರ್ಮಿಕರೊಬ್ಬರ ಮೇಲೆ ಹಲ್ಲೆಗೈದ ಬಳಿಕ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕರೀಂ ಕೆದ್ಕಾರ್ ವಿರುದ್ಧ ಗಾಂಜಾ ಮಾರಾಟ, ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರಿಗೆ ವಂಚನೆ, ರೋಗಿಗಳಿಗೆ ರಕ್ತ ನೀಡುವ ಸೋಗಿನಲ್ಲಿ ಹಣ ಕಬಳಿಕೆ ಸೇರಿದಂತೆ ಇನ್ನಿತರ ಗಂಭೀರ ಆರೋಪಗಳಿವೆ.

ಇದೇ ವಿಚಾರಕ್ಕಾಗಿ ಆರೋಪಿಯನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಮೂರು ವರ್ಷಗಳ ಹಿಂದೆ ಸಾರ್ವಜನಿಕರು ಬೋಳಂತೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿ ಜಿಲ್ಲಾ ಎಸ್ಪಿಯವರಿಗೆ ಮತ್ತು ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದರು. ಆ ಸಮಯ ಪೊಲೀಸರು ಈತನ ಬಗ್ಗೆ ಮೃಧು ನಿಲುವು ತೆಗೆದುಕೊಂಡಿದ್ದೆ ಇದೀಗ ಈತನ ನೀಚ ಕೃತ್ಯಗಳು ಮತ್ತಷ್ಟು ಬೆಳೆಯಲು ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.

ಕಿಂಗ್ ಪಿನ್ ಕರೀಂ ಕೆದ್ಕಾರ್ ಕೇರಳಕ್ಕೆ ಪರಾರಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಆತನ ಸಹಚರ ನಂದಾವರ ಇಕ್ಬಾಲ್ ಸೇರಿದಂತೆ ಇವರಿಬ್ಬರ ಬಂಧನಕ್ಕಾಗಿ ವಿಶೇಷ ತಂಡಗಳು ಕಾರ್ಯಾಚರಿಸುತ್ತಿವೆ.

- Advertisement -

Related news

error: Content is protected !!