Thursday, August 27, 2026
spot_imgspot_img
spot_imgspot_img

ಬಂಟ್ವಾಳ: ನೇತ್ರಾವತಿ ನದಿಯಿಂದ ಅಕ್ರಮ ಮರಳು ಸಂಗ್ರಹಣೆ: ಸಾವಿರಾರು ಮೌಲ್ಯದ ಮರಳು ಪೊಲೀಸ್ ವಶ..!

- Advertisement -
- Advertisement -

ಬಂಟ್ವಾಳ: ನೇತ್ರಾವತಿ ನದಿಯಿಂದ ಅನುಮತಿಯಿಲ್ಲದೆ ಮರಳುನ್ನು ಕದ್ದು, ನದಿ ಕಿನಾರೆಯಲ್ಲಿ ಸಂಗ್ರಹಿಸಿರುವುದನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್‌.ಐ. ಹರೀಶ್‌ ಎಂ.ಆರ್ ಹಾಗೂ ಸಿಬ್ಬಂದಿಗಳ ತಂಡ ಪತ್ತೆಹಚ್ಚಿದ್ದಾರೆ.

ಬಂಟ್ವಾಳ ಪುದು ಗ್ರಾಮದ, ಸುಜೀರ್‌ ಎಂಬಲ್ಲಿ ಯಾರೋ ಕಳ್ಳರು ನೇತ್ರಾವತಿ ನದಿಯಿಂದ ಯಾವುದೇ ಅನುಮತಿಯಿಲ್ಲದೆ ಮರಳುನ್ನು ಕದ್ದು, ನದಿ ಕಿನಾರೆಯಲ್ಲಿ ಸಂಗ್ರಹಿಸಿರುವುದನ್ನು ಪತ್ತೆಹಚ್ಚಿದ್ದಾರೆ. ಈ ವೇಳೆ ಅಂದಾಜು ರೂ.60,000/- ಮೌಲ್ಯದ 36 ಯುನಿಟ್‌ ನಷ್ಟು (ಒಟ್ಟು 12 ಲೋಡ್‌) ಮರಳುನ್ನು ಅಲ್ಲಲ್ಲಿ ಪ್ರತ್ಯೇಕ ಪ್ರತ್ಯೇಕ ದಿಣ್ಣೆ ಮಾಡಿ ದಾಸ್ತಾನು ಮಾಡಿರುವುದು ಕಂಡು ಬಂದಿರುತ್ತದೆ. ಮುಂದಿನ ಕಾನೂನು ಕ್ರಮಕ್ಕಾಗಿ ಮರಳನ್ನು ಸ್ವಾಧೀನಪಡಿಸಿಕೊಂಡು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!