Friday, April 19, 2024
spot_imgspot_img
spot_imgspot_img

ಮುಂಬೈನ ಶಾಪಿಂಗ್​ ಮಾಲ್ ನಲ್ಲಿ ಭಾರೀ ಅಗ್ನಿ ಅವಘಡ

- Advertisement -G L Acharya panikkar
- Advertisement -

ಮುಂಬೈ(ಅ.23) :  ನಿನ್ನೆ ತಡರಾತ್ರಿ ಮುಂಬೈನ ಶಾಪಿಂಗ್​ ಮಾಲ್​ವೊಂದ್ರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಸೆಂಟ್ರಲ್​ ಮುಂಬೈನ ನಾಗಪಾದಾದ ಸಿಟಿ ಸೆಂಟರ್ ಮಾಲ್​​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಮಾಲ್​ನ ಪಕ್ಕದ ಬಹುಮಹಡಿ ಕಟ್ಟಡದಲ್ಲಿ ವಾಸವಿದ್ದ ಸುಮಾರು 3500 ನಿವಾಸಿಗಳನ್ನ ಅಲ್ಲಿಂದ ಹತ್ತಿರದ ಮೈದಾನವೊಂದಕ್ಕೆ ಸ್ಥಳಾಂತರ ಮಾಡಲಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದು, ಇಂದು ಬೆಳಗ್ಗೆ ಕೂಡ ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ. ಕಾರ್ಯಾಚರಣೆ ವೇಳೆ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ.24 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿದ್ದು, ಸುಮಾರು 250 ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ.

- Advertisement -

Related news

error: Content is protected !!