- Advertisement -
- Advertisement -



ಬಂಟ್ವಾಳ: ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆ ಬೀಳ್ಕೊಡುಗೆ ಸಮಾರಂಭ ಜೂ.1 ನೇ ಶನಿವಾರ ಬೆಳ್ಳಿಗೆ 9.45 ರಿಂದ ಎಲ್ ಐ ಸಿ ಶಾಖೆಯ ಕೆಳಗಿನ ಮಹಡಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯಲ್ಲಿ ಸೇವೆ ಸಲ್ಲಿಸಿದ ಮಾಲತಿ ಕೆ.ಎಸ್ ಹಾಗೂ ಎಸ್.ಎಲ್. ಶ್ರೀಪಾದ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಪ್ರಬಂಧಕರು, ಎಲ್ ಐ ಸಿ ಆಫ್ ಇಂಡಿಯಾ ಬಂಟ್ವಾಳ ಶಾಖೆ ಕೆ. ಸತೀಶ್ ವಹಿಸಲಿದ್ದಾರೆ. ನಿವೃತ್ತ ವಿಭಾಗಾಧಿಕಾರಿ, ಎಲ್ ಐ ಸಿ ಆಫ್ ಇಂಡಿಯಾ ಚಿಕ್ಕ ಪುತ್ತೂರು ಚಂದ್ರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 9:45ಕ್ಕೆ “ಗೀತಾ ನೃತ್ಯ ಸಂಭ್ರಮ” ಬಳಿಕ ಗಂಟೆ 11:00 ರಿಂದ ಸಭಾ ಕಾರ್ಯಕ್ರಮ ನಡೆದು ಬಳಿಕ ಮಧ್ಯಾಹ್ನ 1:00 ರಿಂದ ಹವ್ಯಾಸಿ ಕಲಾವಿದರು ಮತ್ತು ಎಲ್‌ಐಸಿ ಸಿಬ್ಬಂದಿಗಳಿಂದ ” ಯಕ್ಷಗಾನ ಪ್ರದರ್ಶನ” ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
- Advertisement -








