Wednesday, July 29, 2026
spot_imgspot_img
spot_imgspot_img

ಬಂಟ್ವಾಳ: ಮದುವೆಗೆಂದು ತೆರಳಿದ ವ್ಯಕ್ತಿ ನಾಪತ್ತೆ!

- Advertisement -
- Advertisement -

ಬಂಟ್ವಾಳ: ವ್ಯಕ್ತಿಯೊಬ್ಬರು ಮದುವೆಗೆ ಹೋಗುವುದಾಗಿ ಹೇಳಿ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ಪಂಜಿಕಲ್ಲು ಗ್ರಾಮದ ಕೋಲ್ದೋಡಿ ನಿವಾಸಿ ಕೇಶವ ಪೂಜಾರಿ (36) ಎಂದು ಗುರುತಿಸಲಾಗಿದೆ.

ಕೇಶವ ಪೂಜಾರಿಯವರು ಇಂಟರ್ ಲಾಕ್ ಕೆಲಸ ಮಾಡಿಕೊಂಡಿದ್ದು, ಮದುವೆಗೆಂದು ತೆರಳಿದವರು ಬಳಿಕ ಮರಳಿ ಮನೆಗೆ ಬಂದಿರಲಿಲ್ಲ. ಹೀಗಾಗಿ ನೆರೆಹೊರೆಯವರ, ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಈ ಹಿಂದೆಯೂ ಅವರು 3-4 ಬಾರಿ ಇದೇ ರೀತಿ ಮನೆ ಬಿಟ್ಟು ಹೋಗಿದ್ದು, ಹೀಗಾಗಿ ಈ ಬಾರಿಯೂ ಮರಳಿ ಬರುತ್ತಾರೆಂದು ಪೊಲೀಸರಿಗೆ ದೂರು ನೀಡಿರಲಿಲ್ಲ.

ಇದೀಗ ಕೇಶವ ಪೂಜಾರಿಯವರ ಪತ್ನಿ ಯಶೋಧಾರವರು ನೀಡಿದ ದೂರಿನನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!