Wednesday, July 29, 2026
spot_imgspot_img
spot_imgspot_img

ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತದ ಪದಕ ಬೇಟೆ, ಇತಿಹಾಸ ಸೃಷ್ಟಿ

- Advertisement -
- Advertisement -

ಗುಲ್ವಿರ್ ಸಿಂಗ್, ಹರ್ಜಿಂದ‌ರ್ ಕೌರ್‌ಗೆ ಬೆಳ್ಳಿ ಪದಕ

ಗ್ಲಾಸ್ಗೊ: ಭಾರತದ ಉದಯೋನ್ಮುಖ ಅಥ್ಲಿಟ್‌ ಗುಲ್ವೀರ್‌ ಸಿಂಗ್‌ ಅವರು ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 10 ಸಾವಿರ ಮೀಟರ್‌ ಓಟ ಸ್ಪರ್ಧೆಯಲ್ಲಿ ಐತಿಹಾಸಿಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಗುಲ್ವೀರ್‌ ಈ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರೆ, ಭಾರತದ ಹರ್ಜಿಂದರ್ ಕೌರ್ ಅವರು ಮಹಿಳೆಯರ 69 ಕೆಜಿ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಸ್ಕಾಟ್‌ನ್‌ ಕ್ರೀಡಾಂಗಣದಲ್ಲಿ ಭಾರೀ ಮಳೆ, ನೀರು ತುಂಬಿದ ಟ್ರ್ಯಾಕ್‌ನಂತಹ ಸವಾಲಿನ ಪರಿಸ್ಥಿತಿಯಲ್ಲೂ ಛಲ ಬಿಡದೆ ಓಡಿದ ಗುಲ್ವೀರ್‌, ಕೊನೆಯವರೆಗೂ ಮುಂಚೂಣಿಯಲ್ಲೇ ಉಳಿದು ಸಹ ಆಟಗಾರರಿಗೆ ಪ್ರಬಲ ಪೈಪೋಟಿ ನೀಡಿದರು. ಗುಲ್ವೀರ್‌ 27 ನಿಮಿಷ 49.78 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. 27 ನಿಮಿಷ 48.93 ಸೆಕೆಂಡುಗಳಲ್ಲಿ ಗುರಿ ತಲುಪಿದ ಆಸ್ಟ್ರೇಲಿಯಾದ ಕೈ ರಾಬಿನ್ಸನ್ ಚಿನ್ನದ ಪದಕ ಗೆದ್ದು ಬೀಗಿದರು. ಇತ್ತ, ಡೇವಿಡ್ ಮುಲ್ಲಾರ್ಕಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಇನ್ನೂ ಭಾರತದ ಹರ್ಜಿಂದರ್ ಕೌರ್ ಮಹಿಳೆಯರ 69 ಕೆ.ಜಿ. ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಬೀಗಿದರು. 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನ 71 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ 29 ವರ್ಷದ ಕೌರ್‌, ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ 7ನೇ ಪದಕ ತಂದುಕೊಟ್ಟಿದ್ದಾರೆ. ಕೆನಡಾದ ಶಾರ್ಲೆಟ್ ಸಿಮೋನ್ಯು ಚಿನ್ನದ ಪದಕ ತಮ್ಮದಾಗಿಸಿಕೊಂಡರು.

- Advertisement -

Related news

error: Content is protected !!