Saturday, June 20, 2026
spot_imgspot_img
spot_imgspot_img

ಕರಾವಳಿಯಲ್ಲಿ ಮತ್ತೊಂದು ಭೀಕರ ಹತ್ಯೆ- ರೌಡಿ ಶೀಟರ್ ಚೆನ್ನ ಫಾರೂಕ್ ಕೊಲೆ

- Advertisement -
- Advertisement -

ಬಂಟ್ವಾಳ: ಬಂಟ್ವಾಳದಲ್ಲಿ ಮತ್ತೊಂದು ಹೆಣ ಬಿದ್ದಿದೆ‌. ರೌಡಿ ಶೀಟರ್ ಚೆನ್ನಾ ಫಾರೂಕ್ ನನ್ನು ದುಷ್ಕರ್ಮಿಗಳು ಮೇಲ್ಕಾರ್ ರಸ್ತೆಯಲ್ಲಿ ಕೊಲೆ ಮಾಡಿದ್ದು, ಇಡೀ ಕರಾವಳಿ ಬೆಚ್ಚಿಬಿದ್ದಿದೆ.


ಮೊನ್ನೆಯಷ್ಟೇ ಸುರೇಂದ್ರ ಬಂಟ್ವಾಳ ಕೊಲೆ ನಡೆದಿದ್ದು, ಆ ಕೊಲೆಯ ಆರೋಪಿಗಳ ಬಂಧನವಾಗುವ ಮೊದಲೇ ಮತ್ತೊಂದು ಕೊಲೆಯಾಗಿದ್ದು, ಪೋಲಿಸ್ ಅಧಿಕಾರಿಗಳಿಗೆ ಮತ್ತಷ್ಟು ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

ತಲಾವರಿನಿಂದ ಕಡಿದು ಕೊಲೆ ನಡೆಸಿದ ಘಟನೆ ಸಂಜೆ ನಡೆದಿದೆ. ರೌಡಿ ಶೀಟರ್ ಫಾರೂಕ್ ಯಾನೆ ಚೆನ್ನ ಫಾರೂಕ್ ಎಂಬಾತನನ್ನು ಆತನ ಸೇಹಿತನೇ ಕೊಲೆ ಮಾಡಿದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಸ್ನೇಹಿತನೇ ತಲವಾರಿನಿಂದ ಕಡಿದು ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ‌. ಫಾರೂಕ್ ನ ಸ್ನೇಹಿತ ನ ಜೊತೆ ಇತ್ತೀಚಿನ ದಿನಗಳಲ್ಲಿ ಉಂಟಾದ ಮುನಿಸು ಕೊಲೆಗೆ ಕಾರಣವಾಗಿರಬೇಕು ಎನ್ನಲಾಗಿದೆ. ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ , ಎಸ್.ಐ.ಪ್ರಸನ್ನ, ಬೇಟಿ ನೀಡಿದ್ದಾರೆ.


- Advertisement -

Related news

error: Content is protected !!