Saturday, May 4, 2024
spot_imgspot_img
spot_imgspot_img

ಬಂಟ್ವಾಳ: ಕಾಣೆಯಾಗಿದ್ದ 3ಕೋಣಗಳಲ್ಲಿ ಎರಡು ಕೋಣಗಳು ಜೀವಂತವಾಗಿದ್ದು ಒಂದು ಶವವಾಗಿ ಪತ್ತೆ…!

- Advertisement -G L Acharya panikkar
- Advertisement -

ಬಂಟ್ವಾಳ: ಕಾಣೆಯಾಗಿದ್ದ ಮೂರು ಕೋಣಗಳ ಪೈಕಿ ಎರಡು ಕೋಣಗಳು ಜೀವಂತವಾಗಿ ಪತ್ತೆಯಾಗಿದ್ದು ಇನ್ನೊಂದು ಕೋಣ ಶವವಾಗಿ ಸಿಕ್ಕಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಅ ಮೂಲಕ ಕಳವು ಪ್ರಕರಣಕ್ಕೆ ತಿರುವು ಸಿಕ್ಕಿದೆ.

ಅಮ್ಮುಂಜೆ ದೇವಂದಬೆಟ್ಟು ವಿನಯ ಬಲ್ಯಾಯ ಎಂಬವರ ಮನೆಯ ಸಮೀಪದ ಗದ್ದೆಯಲ್ಲಿ ಮೇಯಲು ಕಟ್ಟಿ ಹಾಕಿದ್ದ ಸುಮಾರು 90 ಸಾವಿರ ಮೌಲ್ಯದ ಮೂರು ಕೋಣಗಳು ಡಿ.17 ರಂದು ನಾಪತ್ತೆಯಾಗಿತ್ತು. ಆದರೆ ಎಷ್ಟು ಹುಡುಕಿದರೂ ಕೋಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ತಡವಾಗಿ ಇಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದರು.

ಜೊತೆಗೆ ಮಹಮ್ಮದ್ ಹನೀಫ್ ಎಂಬಾತನ ಮೇಲೆ ಸಂಶಯವಿದ್ದು ಈತ ಕಳವು ಮಾಡಿರುವ ಶಂಕೆಯನ್ನು ದೂರಿನಲ್ಲಿ ತಿಳಿಸಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಪೋಲೀಸರು ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುವ ವೇಳೆ ಕೋಣಗಳು ಪತ್ತೆಯಾಗಿದೆ. ಮೂರು ಕೋಣಗಳ ಪೈಕಿ ಎರಡು ಕೋಣಗಳು ಸ್ವಲ್ಪ ದೂರದ ಗುಡ್ಡವೊಂದರಲ್ಲಿ ಮೇಯುತ್ತಿದ್ದರೆ, ಇನ್ನೊಂದು ಕೋಣ ಮಾತ್ರ ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಹೂತು ಮೇಲೆ ಬರಲಾಗದೆ ಮೃತಪಟ್ಟಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ಸ್ಥಳೀಯರು ಕೋಣಗಳು ಇರುವುದನ್ನು ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ‌. ಬಳಿಕ ಕೋಣಗಳನ್ನು ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದೀಗ ವಶಕ್ಕೆ ಪಡೆದುಕೊಂಡಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿ ಆತ ಕಳವು ಪ್ರಕರಣದಲ್ಲಿದ ಕಾರಣ ಆತನನ್ನು ಬಿಟ್ಟು ಕಳುಹಿಸಲಾಗಿದೆ. ಗೊಂದಲ ಉಂಟುಮಾಡಿದ್ದ ಕೋಣಗಳ ಕಳವು ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ.

- Advertisement -

Related news

error: Content is protected !!