Tuesday, March 2, 2021

ಬಂಟ್ವಾಳ ನಗರ ಪೊಲೀಸ್ ಠಾಣಾ ಪ್ರಥಮ ಪೋಲೀಸ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡ ಚೆಲುವರಾಜು

ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಮೇಲ್ದರ್ಜೆಗೊಂಡ ಬಳಿಕ ಪ್ರಥಮ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಚೆಲುವರಾಜು ಅವರು ಇಂದು ಬೆಳಿಗ್ಗೆ ಅಧಿಕಾರ ವಹಿಸಿಕೊಂಡರು.

ಕೋಮುಸೂಕ್ಮ ಹಾಗೂ ಜನಸಂಖ್ಯೆ ಯ ಆಧಾರ ದ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ನ್ನು ಪೋಲೀಸ್ ಇನ್ಸ್ ಪೆಕ್ಟರ್ ಠಾಣೆಯಾಗಿ ಮೇಲ್ದರ್ಜೆಗೇರಿಸುವಂತೆ ಹಲವಾರು ವರ್ಷಗಳಿಂದ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಅದರಂತೆ ಈ ಬಾರಿ ರಾಜ್ಯದಲ್ಲಿ ಒಟ್ಟು 86 ಸೆನ್ಸಿಟಿವ್ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಿ ಆದೇಶ ಹೊರಡಿಸಿದ್ದಾರೆ.

ದ.ಕ.ಜಿಲ್ಲೆಯ ಬಂಟ್ವಾಳ ನಗರ , ಉಡುಪಿ ಜಿಲ್ಲೆಯ ಉಡುಪಿ ನಗರ ಹಾಗೂ ಕಾರವಾರ ದಲ್ಲಿ ಭಟ್ಕಳ ಮತ್ತು ಹೊನ್ನಾವರ ಠಾಣೆ ಗಳನ್ನು ಒಳಗೊಂಡಂತೆ ಒಟ್ಟು ರಾಜ್ಯದಲ್ಲಿ 86 ಪೋಲೀಸ್ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಿ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿ.ಸಿ.ಐ.ಬಿ ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ಬರ್ಖಾಸ್ತುಗೊಳಿಸಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರ್ಕಲ್ ಇನ್ಸ್ ಪೆಕ್ಟರ್ ಗಳನ್ನು ಮೇಲ್ದರ್ಜೆಗೊಂಡ ಠಾಣೆಗಳ ಪೋಲೀಸ್ ಇನ್ಸ್ ಪೆಕ್ಟರ್ ಗಳಾಗಿ ವರ್ಗಾವಣೆ ಮಾಡಿ ಸರಕಾರ ಅದೇಶದಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಬಂಟ್ವಾಳ ವೃತ್ತದಲ್ಲಿ ಒಟ್ಟು ನಾಲ್ಕು ಠಾಣೆಗಳು ಒಳಗೊಂಡಿತ್ತು. ಬಂಟ್ವಾಳ ನಗರ , ಗ್ರಾಮಾಂತರ, ವಿಟ್ಲ ಹಾಗೂ ಟ್ರಾಫಿಕ್ ಪೊಲೀಸ್ ಠಾಣೆಗಳು ಸೇರಿಕೊಂಡಿತ್ತು. ಬಂಟ್ವಾಳ ನಗರ ಪೋಲೀಸ್ ಠಾಣೆ ಪೋಲೀಸ್ ಇನ್ಸ್ ಪೆಕ್ಟರ್ ಆಗಿ ಮೆಲ್ದರ್ಜಗೊಂಡ ಬಳಿಕ ಇನ್ಮುಂದೆ ಬಂಟ್ವಾಳ ವೃತ್ತ ಪೊಲೀಸ್ ನಿರೀಕ್ಷರ ಎಂಬುದು ಬದಲಾಗಿ ಗ್ರಾಮಾಂತರ ವೃತ್ತ ಪೊಲೀಸ್ ನಿರೀಕ್ಷಕ ರಾಗಿ ಬದಲಾವಣೆ ಅಗುತ್ತದೆ.

ಬಂಟ್ವಾಳ ನಗರ ಠಾಣೆ ಹಾಗೂ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಗಳು ವೃತ್ತದಿಂದ ಹೊರಗುಳಿಯುತ್ತದೆ. ಬಂಟ್ವಾಳ ನಗರ ಠಾಣೆಗೆ ಹೊಸದಾಗಿ ಕರ್ತವ್ಯ ಕ್ಕೆ ಹಾಜರಾದ ಮಂಗಳೂರು ಡಿ.ಸಿ‌.ಐ.ಬಿ ಇನ್ಸ್ ಪೆಕ್ಟರ್ ಆಗಿದ್ದ ಚೆಲುವರಾಜು ಅವರು ಪೊಲೀಸ್ ಇನ್ಸ್ ಪೆಕ್ಟರ್ ಆಗಿಯೂ ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಗೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ಮಾಡಲಿದ್ದಾರೆ.

ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರು ಬಂಟ್ವಾಳ ಗ್ರಾಮಾಂತರ ಹಾಗೂ ವಿಟ್ಲ ಪೊಲೀಸ್ ಠಾಣೆಗೆ ವೃತ್ತ ನಿರೀಕ್ಷರಾಗಿ ಕರ್ತವ್ಯ ಮಾಡಲಿದ್ದಾರೆ.

ಬಂಟ್ವಾಳ ನಗರ ಠಾಣಾ ಎಸ್.ಐ.ಅಗಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಅವಿನಾಶ್ ಹಾಗೂ ಅಪರಾಧ ವಿಭಾಗದ ಎಸ್‌.ಐ.ಅಗಿ ಕಲೈಮಾರ್ ಅವರು ಕರ್ತವ್ಯದಲ್ಲಿರುತ್ತಾರೆ.

- Advertisement -

MOST POPULAR

HOT NEWS

Related news

error: Content is protected !!