Sunday, June 7, 2026
spot_imgspot_img
spot_imgspot_img

ಬಂಟ್ವಾಳ: ದಕ್ಷ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್‌ರವರಿಗೆ ರಾಷ್ಟ್ರಪತಿ ಪ್ರಶಸ್ತಿ

- Advertisement -
- Advertisement -

ಬಂಟ್ವಾಳ: ದಕ್ಷ , ಧೈರ್ಯ, ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿರುವ ಬಂಟ್ವಾಳ ವಗ್ಗ ನಿವಾಸಿ ಪೊಲೀಸ್ ಇನ್ಸೆಕ್ಟರ್ ಶಾಂತಾರಾಮ್ ಕುಂದರ್ ಅವರಿಗೆ ರಾಷ್ಟ್ರಪತಿ ಪ್ರಶಸ್ತಿ ಲಭಿಸಿದೆ.

ವೃತ್ತಿ ಜೀವನದಲ್ಲಿ ಸಾರ್ವಜನಿಕ ಸೇವೆಯಲ್ಲಿ ಇವರ ಅಪಾರವಾದ ಸಮರ್ಪಣೆ, ಶಿಸ್ತು, ನಿಷ್ಠೆ ಹಾಗೂ ಸೇವಾ ಮನೋಭಾವವನ್ನು ಗುರುತಿಸಿ ನೀಡಲ್ಪಟ್ಟ ರಾಷ್ಟ್ರಪತಿಯವರ ಮೆರಿಟೋರಿಯಸ್ ಸರ್ವೀಸ್ ಅವಾರ್ಡ್ ಗೌರವ ಪಡೆದಿರುವುದು ಕರ್ನಾಟಕಕ್ಕೆ ಸಂದ ಗೌರವ.

ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ, ಅಪರಾಧ ತಡೆಗಟ್ಟುವಲ್ಲಿ, ಸಮುದಾಯದೊಂದಿಗೆ ಸಕ್ರಿಯವಾಗಿ ಬೆರೆತು ಇವರು ಕಾರ್ಯ ನಿರ್ವಹಿಸಿದ್ದಾರೆ. 2016 ರಲ್ಲಿ ಅತ್ಯುತ್ತಮ ಸೇವೆಗಾಗಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕವೂ ಅವರಿಗೆ ಲಭಿಸಿತ್ತು. ಇಂತಹ ನಿಸ್ವಾರ್ಥ ಸೇವಾ ಮನೋಭಾವದ ಶಾಂತಾರಾಮ್ ಕುಂದರ್ ರವರಿಗೆ ರಾಷ್ಟ್ರಪತಿಗಳಿಂದ ಅತ್ಯುನ್ನತ ಗೌರವ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

ಶಾಂತಾರಾಮ್ ಕುಂದರ್ ಅವರು ತಮ್ಮ ವೃತ್ತಿ ಜೀವನದಲ್ಲಿ ನೈತಿಕತೆ, ವೃತ್ತಿಪರತೆ, ಪ್ರಾಮಾಣಿಕತೆ, ಧೈರ್ಯ ಮತ್ತು ಜನ ಸ್ನೇಹಿ ಕಾರ್ಯಶೈಲಿಗಾಗಿ ಈಗಾಗಲೇ ಹಲವು ಕಡೆ ಗೌರವಿಸಲ್ಪಟ್ಟಿದ್ದಾರೆ.

- Advertisement -

Related news

error: Content is protected !!