Thursday, May 2, 2024
spot_imgspot_img
spot_imgspot_img

ತಾಂತ್ರಿಕ ಸಿರಿ, ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಅವಿಷ್ಕಾರ ಮತ್ತು ಬಳಕೆ ಬಗ್ಗೆ ಮಾಹಿತಿ ಕಾರ್ಯಕ್ರಮ

- Advertisement -G L Acharya panikkar
- Advertisement -

ಬಂಟ್ವಾಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್.(ರಿ) ಇದರ ವತಿಯಿಂದ ತಾಂತ್ರಿಕ ಸಿರಿ,ಆಧುನಿಕ ಕೃಷಿ ಯಲ್ಲಿ ಯಂತ್ರೋಪಕರಣಗಳ ಅವಿಷ್ಕಾರ ಮತ್ತು ಬಳಕೆ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಶ್ರೀಮತಿ ಪ್ರೇಮ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮ ಕ್ಕೆ ಶುಭಹಾರೈಸಿದರು. ಸಂಪನ್ಮೂಲವ್ಯಕ್ತಿಗಳಾಗಿ ಬಂಟ್ವಾಳ ಕೃಷಿ ಅಧಿಕಾರಿ ನಂದನ್ ಶೆಣೈ ಮತ್ತು ರೈತರತ್ನ ಪ್ರಶಸ್ತಿ ವಿಜೇತ ಪಿಂಗಾರ ರೈತ ಉತ್ಪಾದಕರ ಕಂಪೆನಿಯ ಅಧ್ಯಕ್ಷರು ರಾಮಕಿಶೋರ್ ಇವರು ತಾಂತ್ರಿಕ ಸಿರಿ,ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಅವಿಷ್ಕಾರ ಮತ್ತು ಬಳಕೆ ಬಗ್ಗೆ ಮಾಹಿತಿ ನೀಡಿದರು.

ರೈತ ರತ್ನ ಪ್ರಶಸ್ತಿಗೆ ಭಾಜನರಾದ ರಾಮಕಿಶೋರ್ ಇವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ಸಂಸ್ಥೆಯ ಸಂಚಾಲಕರು ಮೋಹನ್ ದಾಸ್ ಕೊಟ್ಟಾರಿ ,ಅಧ್ಯಕ್ಷರು ಸುದರ್ಶನ್ ಜೈನ್, ಚಿನ್ನ ರಲೋಕ ಅಧ್ಯಕ್ಷೆ ಕುಮಾರಿ ಭಾಗ್ಯಶ್ರೀ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಾಮಚಂದ್ರ ಸ್ವಾಗತಿಸಿ, ವಕೀಲರಾದ, ಜೇಸಿಐ ಅಧ್ಯಕ್ಷರು ಶ್ರೀಮತಿ ಶೈಲಜಾ ರಾಜೇಶ್ ನಿರೂಪಿಸಿ, ಸೌಮ್ಯಯಶವಂತ್ ಭಂಡಾರಿಬೆಟ್ಟು ವಂದಿಸಿದರು.

- Advertisement -

Related news

error: Content is protected !!