ಬಂಟ್ವಾಳ(ನ.14): ಬಂಟ್ವಾಳ ಪುರಸಭಾದ ನೂತನ ಅಧ್ಯಕ್ಷರಾದ ಮಹಮ್ಮದ್ ಶರೀಫ್ ಶಾಂತಿಅಂಗಡಿ ಮತ್ತು ನೂತನ ಉಪಾಧ್ಯಕ್ಷರಾದ ಶ್ರೀಮತಿ ಜೇಸಿಂತಾ ಡಿಸೋಜ ಇವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮಾವೇಶ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ, ಎಮ್ ಎಸ್ ಮೊಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಹಾಗೂ ಬೇಬಿ ಕುಂದರ್,ಇರಾ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಝಕ್,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರದಾನಕಾರ್ಯದರ್ಶಿಯಾದ ಮೊಹಮ್ಮದ್ ನಂದಾವರ,ಪುರಸಭಾ ಸದಸ್ಯರಾದ ಲೋಲಕ್ಷ,ಸಿದ್ದಿಕ್ ಮಸ್ಜಿದ್-ಎ- ಮಸೀದಿಯ ಮುತ್ತಲಿಬ್ ಗೂಡಿನಬಳಿ ಅಧ್ಯಕ್ಷರು, ಸಲಾಮ್ ಮಸೀದಿಯ ಮುತ್ತಲಿಬ್ ಪ್ರಧಾನಕಾರ್ಯದರ್ಶಿ,ಗೂಡಿನಬಳಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕೆರೀಂ,ಹಿರಿಯ ಕಾಂಗ್ರೆಸ್ ಮುಖಂಡರುಅಬ್ದುಲ್ ಖಾಧರ್, ಪರ್ವೀಜ್ ಜಿ ಕೆ , ಕಾಸಿಮ್,ಯುವ ಕಾಂಗ್ರೆಸ್ ಘಟಕ ರಿಜ್ವಾನ್ ಗೂಡಿನಬಳಿ, ಅಮೀನ್,ಸಂಶೀರ್,ಮೊದಲಾದವರು ಉಪಸ್ಥಿತರಿದ್ದರು.










