Sunday, June 14, 2026
spot_imgspot_img
spot_imgspot_img

ಬಂಟ್ವಾಳ: ವೈದ್ಯರ ಬಳಿ ತೆರಳಿದ ಹೋಟೆಲ್ ಮಾಲಕ ನಾಪತ್ತೆ; ಪತ್ನಿಯಿಂದ ದೂರು ದಾಖಲು

- Advertisement -
- Advertisement -

ಬಂಟ್ವಾಳ: ಕೈ ನೋವು ಎಂದು ವೈದ್ಯರ ಬಳಿ ತೆರಳಿದ ಹೋಟೆಲ್ ಮಾಲಕ ನಾಪತ್ತೆಯಾದ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಸಿದ್ದಕಟ್ಟೆಯ ಸಂದೀಪ್ ಜೈನ್ ನಾಪತ್ತೆಯಾದ ಯುವಕ ಎಂದು ತಿಳಿದು ಬಂದಿದೆ.

ಸಂದೀಪ್ ಜೈನ್ ಅವರು ಕಾರ್ಕಳ ತಾಲೂಕಿನ ಈದು ಗ್ರಾಮದ ನೂರಲ್ ಬೆಟ್ಟು ಎಂಬಲ್ಲಿ ವಾಸವಿದ್ದು, ಪ್ರಸ್ತುತ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಸಿದ್ದಕಟ್ಟೆ ಪೇಟೆಯಲ್ಲಿರುವ ಜೈನ್ ರೆಸ್ಟೋರೆಂಟ್ ಎಂಬ ಹೆಸರಿನ ಹೋಟೆಲ್ ಅನ್ನು ನಡೆಸಿಕೊಂಡಿದ್ದರು. ಜು.31 ರಂದು ಕೈ ನೋವು ಎಂದು ವೈದ್ಯರ ಬಳಿ ಹೋಗಿ ಬರುತ್ತೇನೆ ಎಂದು ಹೋಟೆಲ್ ನಿಂದ ಆಕ್ಟೀವಾ ಸ್ಕೂಟರ್ ನಲ್ಲಿ ತೆರಳಿದ ಅವರು ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಂದೀಪ್ ಅವರ ಪತ್ನಿ ಅಕ್ಷತಾ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪುಂಜಾಲಕಟ್ಟೆ ಪೊಲೀಸರು ಸಂದೀಪ್ ಪತ್ತೆಯಾದಲ್ಲಿ 08256-286375 ಅಥವಾ 0824-2220500 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!