Wednesday, June 17, 2026
spot_imgspot_img
spot_imgspot_img

ಬಂಟ್ವಾಳ: ಟ್ರಯಲ್ ನೋಡುವುದಾಗಿ ನಂಬಿಸಿ ದ್ವಿಚಕ್ರ ವಾಹನ ವಾಪಾಸು ನೀಡದೆ ವಂಚನೆ..!

- Advertisement -
- Advertisement -

ಬಂಟ್ವಾಳ: ಅಪರಿಚಿತ ವ್ಯಕ್ತಿರ್ಯೋವ ಬೈಕ್ ಮಾರಾಟದ ಅಂಗಡಿಗೆ ಬಂದಿದ್ದು, ಟ್ರಯಲ್ ನೋಡಿ ಬರುವುದಾಗಿ ನಂಬಿಸಿ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗಿ ಹಿಂತಿರುಗಿಸದೇ ಪರಾರಿಯಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಮಹಮ್ಮದ್ ಶಮೀರ್ ಬಿನ್ ಉಮರಬ್ಬ ಬಂಟ್ವಾಳ ತಾಲೂಕು ರವರು ಮೆಲ್ಕಾರ್ ಪಾಣೆಮಂಗಳೂರಿನಲ್ಲಿ ಬೈಕ್ ಪಾಯಿಂಟ್ ಎಂಬ ಹೆಸರಿನ ಅಂಗಡಿ ಹೊಂದಿದ್ದು, ಸುಮಾರು 2 ವರ್ಷಗಳಿಂದ ಬೇರೆಯವರಿಂದ ವಾಹನಗಳನ್ನು ಖರೀದಿಸಿ ಮಾರಾಟ ಮಾಡುವ ವ್ಯವಹಾರವನ್ನು ಮಾಡುತ್ತಿದ್ದರು. 2 ತಿಂಗಳ ಹಿಂದೆ KA 70 E 9510 TVS NTORQ 125 ನೇ ದ್ವಿಚಕ್ರ ವಾಹನವನ್ನು ಅದರ ನೋಂದಣಿ ಮಾಲಕರಿಂದ ಖರೀದಿಸಿ, ಮಾರಾಟಕ್ಕೆ ತನ್ನ ಅಂಗಡಿಯಲ್ಲಿ ಇಟ್ಟಿದ್ದರು.

ಆ. 13 ಸಂಜೆ ವೇಳೆ ಶಮೀರ್ ಬಿನ್ ಉಮರಬ್ಬ ಅವರ ಅಂಗಡಿಗೆ ಬಂದ ಅಪರಿಚಿತ ವ್ಯಕ್ತಿರ್ಯೋವ KA 70 E 9510 TVS 125 ನೋಂದಣಿಯ ವಾಹನವನ್ನು ಖರೀದಿಸುವುದಾಗಿ ಹೇಳಿ, ಟ್ರಯಲ್ ನೋಡಿ ಬರುವುದಾಗಿ ನಂಬಿಸಿ ದ್ವಿಚಕ್ರ ವಾಹನವನ್ನು ಪಡೆದುಕೊಂಡು ಟ್ರಯಲ್ ನೋಡಲು ಹೋದವರು ಈವರೆಗೆ ಹಿಂತಿರುಗಿಸದೇ ವಂಚಿಸಿರುತ್ತಾನೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ: ಅ.ಕ್ರ 143/2024 ಕಲಂ: 318(2),318(4), BNS -2023 ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!