Wednesday, September 2, 2026
spot_imgspot_img
spot_imgspot_img

ಬಾರ್​ಗಳಲ್ಲಿ 50% ಗ್ರಾಹಕರಿಗೆ ಕೂರಲು ಅವಕಾಶ ನೀಡಬೇಕು- ಕೋವಿಡ್ ನಿಯಮಾವಳಿ ಪಾಲಿಸಲು ನಾವು ಬದ್ಧ: ಗೋವಿಂದರಾಜ್ ಹೆಗ್ಡೆ

- Advertisement -
- Advertisement -

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣ ತರುವ ಹಿನ್ನೆಲೆ ರಾಜ್ಯ ಸರ್ಕಾರ ಬಾರ್​ಗಳಲ್ಲಿ ಪಾರ್ಸೆಲ್​ಗೆ ಮಾತ್ರವೇ ಅವಕಾಶ ನೀಡಿದೆ. ಸರ್ಕಾರದ ಆದೇಶಕ್ಕೆ ಮದ್ಯ ಮಾರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

ವೈನ್ ಮರ್ಚೆಂಟ್ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಈ ಕುರಿತು ಹೇಳಿಕೆ ನೀಡಿದ್ದು, ಸರಕಾರ ಕೇವಲ ತನ್ನ ಆದಾಯ ನೋಡಿದರೆ ಸಾಲೋದಿಲ್ಲ. ಮದ್ಯ ಮಾರಾಟಗಾರರ ಹಿತವನ್ನು ಕಾಪಾಡಬೇಕು ಎಂದಿದ್ದಾರೆ.

ಮದ್ಯದಂಗಡಿಗಳಿಗೆ ಪಾರ್ಸೆಲ್​ಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ. ಈ ಆದೇಶಕ್ಕೆ ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್​ನ ವಿರೋಧವಿದೆ. ಹಿಂದಿನ ಲಾಕ್ಡೌನ್​ನಿಂದ ಚೇತರಿಸಿಕೊಳ್ಳುವಾಗಲೇ ಈ ಆದೇಶ ಬಂದಿದೆ. ಶೇಕಡಾ 50 ಗ್ರಾಹಕರನ್ನು ಇರಿಸಿಕೊಂಡು ವ್ಯಾಪಾರ ನಡೆಸಲು ಅವಕಾಶ ಕೊಡಿ. ಕೇವಲ ಪಾರ್ಸೆಲ್ ನೀಡುವುದರಿಂದ ವ್ಯಾಪಾರ ಆಗುವುದಿಲ್ಲ ಎಂದಿದ್ದಾರೆ.

ಕೋವಿಡ್ ನಿಯಮಾವಳಿ ಪಾಲಿಸಲು ನಾವು ಬದ್ಧರಾಗಿದ್ದೇವೆ. ಆಹಾರದೊಂದಿಗೆ ಮದ್ಯವನ್ನು ಸೇವಿಸಲು ಅವಕಾಶ ಮಾಡಿಕೊಡಿ. ರಾಜ್ಯದಲ್ಲಿ 5,300 ರೆಸ್ಟೋರೆಂಟ್ ಸಹಿತ ಬಾರ್​ಗಳಿವೆ. ಶುಭ ಕಾರ್ಯಗಳು ಆರಂಭವಾಗುವಾಗಲೇ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಪರವಾನಿಗೆ ರಿನೀವಲ್ ಮಾಡುವ ಸಮಯ ಬಂದಿದೆ ಎಂದು ಗೋವಿಂದರಾಜ್ ಹೆಗ್ಡೆ ಹೇಳಿದ್ದಾರೆ

- Advertisement -

Related news

error: Content is protected !!