Friday, June 26, 2026
spot_imgspot_img
spot_imgspot_img

ಸೆಕ್ಯೂರಿಟಿ ಗಾರ್ಡ್‍ನ ಕೈ-ಕಾಲು ಕಟ್ಟಿ ಹಾಕಿ ಮದ್ಯ ದೋಚಿದ ಕುಡುಕರು!

- Advertisement -
- Advertisement -

ಚಿಕ್ಕೋಡಿ: ಹಣ, ಬಂಗಾರ ಕಳ್ಳತನ ಮಾಡುವುದನ್ನು ಎಲ್ಲರೂ ಕೇಳಿದ್ದಾರೆ, ಆದರೆ ಇಲ್ಲೊಂದು ವಿಚಿತ್ರವಾದ ಪ್ರಕರಣ ದಾಖಲಾಗಿದೆ. ಸೆಕ್ಯೂರಿಟಿ ಗಾರ್ಡ್‍ನ ಕೈ-ಕಾಲನ್ನು ಕಟ್ಟಿಹಾಕಿ ಮದ್ಯ(ಎಣ್ಣೆ) ದೋಚಿದ ಘಟನೆ ನಡೆದಿದೆ.

ಟೈಂ ಅಲ್ಲದ ಟೈಂಗೆ ಬಂದು ಸೆಕ್ಯೂರಿಟಿ ಬಳಿ ಎಣ್ಣೆ ಕೇಳಿದ್ರು. ಇಷ್ಟೊತ್ತಿಗೆ ಅಂಗಡಿ ಓಪನ್ ಮಾಡಲ್ಲ ಅಂದ ಸೆಕ್ಯೂರಿಟಿ ಗಾರ್ಡ್ನ ಕೈ, ಕಾಲು ಕಟ್ಟಿ ಹಾಕಿ ಬರೋಬ್ಬರಿ ನಾಲ್ಕೂವರೆ ಲಕ್ಷ ರೂಪಾಯಿ ಮೌಲ್ಯದ ಮದ್ಯ ಕದ್ದು ಪರಾರಿಯಾಗಿದ್ದಾರೆ.


ಇಂತಹ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟೇಶ್ವರ ವೈನ್ ಶಾಪ್‌ನಲ್ಲಿ ಗುರುವಾರ ಮಧ್ಯರಾತ್ರಿ 1 ಗಂಟೆಯಲ್ಲಿ ಸಂಭವಿಸಿದೆ.

ವೆAಕಟೇಶ್ವರ ವೈನ್ ಶಾಪ್ ಬಳಿ ಬಂದ 6 ಜನರಿದ್ದ ತಂಡ, ಎಣ್ಣೆ ಕೇಳಿದ್ದಾರೆ. ಇಲ್ಲ ಸಾರ್, ಅಂಗಡಿ ಕ್ಲೋಸ್ ಆಗಿದೆ. ಬೆಳಗ್ಗೆ ಓಪನ್ ಆಗುತ್ತೆ ಬನ್ನಿ ಎನ್ನುತ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್ಗೆ ಜೀವ ಬೆದರಿಕೆ ಹಾಕಿ ಅಂಗಡಿಯಲ್ಲಿದ್ದ ಮದ್ಯದ ಬಾಟಲಿಗಳನ್ನು ದೋಚಿಕೊಂಡು ಹೋಗಿದ್ದಾರೆ.


ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮತ್ತು ವೈನ್ ಶಾಪ್ ಮಾಲೀಕರು ಪರಿಶೀಲನೆ ನಡೆಸಿದರು. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!