- Advertisement -
- Advertisement -



ಸರ್ಕಾರಿ ಆಸ್ಪತ್ರೆ ವೈದ್ಯರು ಚುಚ್ಚುಮದ್ದು ನೀಡಿದ ಬಳಿಕ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಮೃತ ಬಾಣಂತಿ ಕೋಲಾರ ತಾಲೂಕಿನ ಜಂಗಾಲಹಳ್ಳಿಯ ನಿವಾಸಿ ಭವಾನಿ(26) ಎಂದು ತಿಳಿದು ಬಂದಿದೆ.
ಸೋಮವಾರ ಬೆಳಗ್ಗೆ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ಭವಾನಿ ದಾಖಲಾಗಿದ್ದರು. ಸಂಜೆ ವೇಳೆಗೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದರು.ಆದರೆ, ಮಧ್ಯರಾತ್ರಿ ಬಾಣಂತಿ ತೀವ್ರ ನೋವಾಗುತ್ತಿರುವ ಬಗ್ಗೆ ವೈದ್ಯರ ಬಳಿ ಹೇಳಿದ್ದಾರೆ. ಈ ಹಿನ್ನಲೆ ವೈದ್ಯರು ಚುಚ್ಚುಮದ್ದು ನೀಡಿದ್ದು, ಕೂಡಲೇ ಮಹಿಳೆ ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವೈದ್ಯರು ನೀಡಿದ ಇಂಜೆಕ್ಷನ್ ನಿಂದ ಬಾಣಂತಿ ಭವಾನಿ ಕೊನೆಯುಸಿರೆಳೆದಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.ಈ ಕುರಿತು ವೈದ್ಯೆ ಡಾ.ಶಾಂತಾ ವಿರುದ್ಧ ಕೋಲಾರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
- Advertisement -