ವಿಟ್ಲ-ಪಡ್ನೂರು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಭಾರತ ಸರಕಾರದ ಆರೋಗ್ಯ ಇಲಾಖೆಯ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಕಾರ್ಡ್ ನೋಂದಾವಣೆಯು ವಿಟ್ಲ-ಪಡ್ನೂರು ಗ್ರಾಮ ಪಂಚಾಯತಿ ಸಭಾಭವನದಲ್ಲಿ ನಡೆಯಿತು. ಇದರಲ್ಲಿ ಸುಮಾರು 400 ಮಂದಿ ಜನರು ನೋಂದಾವಣೆ ಮಾಡಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಬಂಟ್ವಾಳದ ಶಾಸಕರಾದ ಶ್ರೀ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು ಆಗಮಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಬೂಡ ಅಧ್ಯಕ್ಷರಾದ ದೇವದಾಸ್ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕಾರ್ಕಳ ಉಪಸ್ಥಿತರಿದ್ದರು.

ಜೊತೆಯಲ್ಲಿ ಮಾಣಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರೋನಾಲ್ಡ್ ಡಿ ಸೋಜ, ಕಾರ್ಯದರ್ಶಿ ಸನತ್ ಕುಮಾರ್ ರೈ, ಬಂಟ್ವಾಳ ರೈತ ಮೋರ್ಚಾದ ಉಪಾಧ್ಯಕ್ಷ ಅರವಿಂದ ರೈ, ಕ್ಷೇತ್ರ ಸಮಿತಿ ಸದಸ್ಯ ನಾಗೇಶ್ ಶೆಟ್ಟಿ, ಪಕ್ಷದ ಪ್ರಮುಖರಾದ ಸತೀಶ್ ಭಟ್ ಪಂಜಿಗದ್ದೆ, ಜಯಂತ ಪಿ, ಉಮೇಶ್ ಶೆಟ್ಟಿ ತಾರಿಯಡ್ಕ, ಅಭಿಷೇಕ್ ರೈ, ರೋಹಿತ್ ರೈ, ಪ್ರವೀಣ್ ಎಸ್.ಕೆ, ಮನೋಜ್, ಚರಣ್, ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಚರಣ್ ಕಾಪುಮಜಲು, ದೇವದಾಸ್ ಪೂಜಾರಿ ಮಾಪಲ ಮತ್ತು ಪಕ್ಷದ ಕಾರ್ಯಕರ್ತರು ಸಹಕರಿಸಿದರು.










