Sunday, June 30, 2024
spot_imgspot_img
spot_imgspot_img

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ..!

- Advertisement -G L Acharya panikkar
- Advertisement -

ಕಲಬುರಗಿ: ಯುವಕನೋರ್ವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದಲ್ಲಿ ನಡೆದಿದೆ.

ಹತ್ಯೆಯಾದ ಯುವಕ ಮಹೇಶ್ ಕೊಲಾಟೆ (28) ಎಂದು ಗುರುತಿಸಲಲಾಗಿದೆ.

ಮಹೇಶ್ ಮಹಾರಾಷ್ಟ್ರದ ಪುಣೆಯಿಂದ ಗಾಣಗಾಪುರ ದತ್ತನ ದರ್ಶನಕ್ಕೆ ಆಗಮಿಸಿದ್ದರು. ಗಾಣಗಾಪುರದ ಸಂಗಮ ಪಕ್ಕದಲ್ಲಿರುವ ಜಮೀನಿನಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿ ಹೋಗಿದ್ದಾರೆ.

ಕೊಲೆಯಾದ ಮಹೇಶ್ ಕಳೆದ ಎರಡು ತಿಂಗಳ ಹಿಂದೆ ಊರು ಬಿಟ್ಟಿದ್ದ. ಮನೆಯವರಿಗೂ ಹೇಳದೆ ಮನೆ ಬಿಟ್ಟು ದೇವಸ್ಥಾನಗಳಿಗೆ ಅಲೆದಾಡುತ್ತಿದ್ದ. ಮೊನ್ನೆ ಗಾಣಾಗಪುರಕ್ಕೆ ಬಂದಿರೋದಾಗಿ ಮಹೇಶ್ ಹೇಳಿದ್ದನಂತೆ. ಮಹೇಶ್ ಗಾಣಾಗಪುರಕ್ಕೆ ಬಂದಿರುವ ಸುದ್ದಿ ತಿಳಿದವರೇ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದೇವಲ್ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!