Wednesday, February 28, 2024
spot_imgspot_img
spot_imgspot_img

ಅನೈತಿಕ ಸಂಬಂಧದ ಹಿನ್ನಲೆ; ಯುವಕನ ಬರ್ಬರ ಕೊಲೆ..!

- Advertisement -G L Acharya panikkar
- Advertisement -

ಕುತ್ತಿಗೆಗೆ ಹಗ್ಗದಿಂದ ಬಿಗಿದು, ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕುದುರಗುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ.

ಶಿವಾನಂದ (19) ಮೃತ ಯುವಕ. ಆತನ ಮನೆಯಲ್ಲಿಯೇ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಎಳನೀರು ವ್ಯಾಪಾರ ಮಾಡುತ್ತಿದ್ದ ಯುವಕನ ಮನೆಯಲ್ಲೇ ತಡರಾತ್ರಿ ಹತ್ಯೆ ನಡೆದಿದೆ. ಯುವಕನು ಭಾಗಿಯಾಗಿರುವ ಅನೈತಿಕ ಸಂಬಂಧವೊಂದರ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎಂಬ ಶಂಕೆಯಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!