ಬರೇಲಿ: ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಬಾಲಕಿಯ ಸೋದರ ಆರೋಪಿಗಳ ಕುಟುಂಬದ ಮಹಿಳೆಯೊಂದಿಗೆ ಪರಾರಿಯಾಗಿದ್ದರಿಂದ ಸೇಡು ತೀರಿಸಿಕೊಳ್ಳಲು ಪೋಷಕರ ಎದುರಲ್ಲೇ 16 ವರ್ಷದ ಬಾಲಕಿಯ ಮೇಲೆ ಎಂಟು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳ ಕುಟುಂಬದ ಮಹಿಳೆ ಬಾಲಕಿಯ ಸಹೋದರನೊಂದಿಗೆ ಓಡಿ ಹೋಗಿದ್ದ ಕಾರಣಕ್ಕೆ ಅಸಮಾಧಾನಗೊಂಡಿದ್ದ ಅವರು ಜೂನ್ 28 ರಂದು ಪೋಷಕರೊಂದಿಗೆ ಬಾಲಕಿಯನ್ನು ಎಳೆದುಕೊಂಡು ಹೋಗಿ ಪೋಷಕರ ಎದುರಲ್ಲೇ ಪರಾರಿಯಾಗಿದ್ದ ಮಹಿಳೆಯ ಸಹೋದರರು, ತಂದೆ ಮತ್ತು ಚಿಕ್ಕಪ್ಪಂದಿರು ಸೇರಿ 8 ಮಂದಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳಲ್ಲಿ ಒಬ್ಬ ಒಪ್ಪಿಗೆ ಇಲ್ಲದೆ ಅವಳನ್ನು ಮದುವೆಯಾಗಿದ್ದಾನೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.

ಜೂನ್ 29 ರಂದು ಮನೆಯಿಂದ ಅವರನ್ನು ಹೊರಗೆ ಕಳುಹಿಸಿದ್ದು, ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದ್ದು, ನಂತರ ಕುಟುಂಬದವರು ಪೊಲೀಸರನ್ನು ಸಂಪರ್ಕಿಸಿದರೂ ದೂರು ದಾಖಲಿಸಿರಲಿಲ್ಲ. ಬಾಲಕಿ ಹೇಳಿಕೆ ನೀಡಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳು ಪ್ರಭಾವಿಗಳಾಗಿದ್ದು, ನಮ್ಮ ಕುಟುಂಬದ ಬೇರೆ ಹುಡುಗಿಯರಿಗೂ ಇದೇ ರೀತಿ ಮಾಡಬಹುದೆಂಬ ಆತಂಕದಲ್ಲಿವೆ ಎಂದು ಬಾಲಕಿಯ ಚಿಕ್ಕಮ್ಮ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.










