Friday, April 19, 2024
spot_imgspot_img
spot_imgspot_img

ಇಂದು ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಮಾಣ ವಚನ; ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ

- Advertisement -G L Acharya panikkar
- Advertisement -

ಬಿಎಸ್​ವೈ ರಾಜೀನಾಮೆ ಬಳಿಕ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಅಂತ ರಾಜ್ಯದ ಜನರಲ್ಲಿ ಮಿಲಿಯನ್ ಡಾಲರ್ ಪ್ರಶ್ನೆ ಉದ್ಭವಿಸಿತ್ತು. ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಲಿಂಗಾಯತ ಸಮುದಾಯದ ಹಾಗೂ ನಿರ್ಗಮಿತ ಸಿಎಂ ಬಿಎಸ್​ ಯಡಿಯೂರಪ್ಪ ಅವರ ಆಪ್ತ ಬಸವರಾಜ್​ ಬೊಮ್ಮಾಯಿಗೆ ಸಿಎಂ ಪಟ್ಟ ಒಲಿದಿದೆ. ಇಂದು ಬಸವರಾಜ್ ಬೊಮ್ಮಾಯಿ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾಗಿರುವ ಬಸವರಾಜ್ ಬೊಮ್ಮಾಯಿ, ಇಂದು ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಬೆಳಗ್ಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್​ಚಮದ್ ಗೆಹಲೋತ್ ನೂತನ ಸಿಎಂ ಬೊಮ್ಮಾಯಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.

ಇಂದು ಬೊಮ್ಮಾಯಿ ಒಬ್ರೆ ಪದಗ್ರಹಣ ಮಾಡ್ತಿದ್ದಾರೆ. ಇನ್ನು ನೂತನ ಸಿಎಂ ಘೋಷಣೆ ಬೆನ್ನಲ್ಲೇ ಸರ್ಕಾರದಲ್ಲಿ ಮೂವರು ಡಿಸಿಎಂಗಳ ಕಾರ್ಯ ನಿರ್ವಹಣೆ ಸಾಧ್ಯತೆ ಇದೆ ಎನ್ನಲಾಗ್ತಿದೆ. ಆರ್. ಅಶೋಕ್, ಗೋವಿಂದ ಕಾರಜೋಳ, ಶ್ರೀರಾಮುಲುಗೆ ಡಿಸಿಎಂ ಪಟ್ಟ ಸಿಗಲಿದೆ ಅನ್ನೊ ಮಾತುಗಳು ಕೇಳಿ ಬರ್ತಿದೆ ಆದ್ರೆ ಇನ್ನೂ ಅಧಿಕೃತವಾಗಿ ಡಿಸಿಎಂ ಯಾರಾಗ್ತಾರೆ ಅನ್ನೊದು ಹೊರ ಬಿದ್ದಿಲ್ಲ. ಅಷ್ಟೆ ಅಲ್ಲ ಬೊಮ್ಮಾಯಿ ಸರ್ಕಾರದಲ್ಲಿ ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ ಅನ್ನೋದು ಕುತೂಹಲ ಮನೆ ಮಾಡಿದೆ. ಬಿಎಸ್​ವೈ ಸಂಪುಟದಲ್ಲಿದ್ದವರು ಬೊಮ್ಮಾಯಿ ಕ್ಯಾಬಿನೆಟ್​ನಲ್ಲು ಮುಂದುವರೀತಾರಾ ಅನ್ನೋದು ಕೂಡ ಚರ್ಚೆಗೆ ಗ್ರಾಸವಾಗಿದೆ.

ಒಟ್ಟಿನಲ್ಲಿ ಬಿಎಸ್​ವೈರಿಂದ ತೆರವಾದ ಸ್ಥಾನಕ್ಕೆ ಅವರ ಆಪ್ತ ಬೊಮ್ಮಾಯಿಯೇ ನೇಮಕವಾಗಿದ್ದಾರೆ. ಇಂದಿನಿಂದ ಕರ್ನಾಟಕದಲ್ಲಿ ಬೊಮ್ಮಾಯಿ ಆಡಳಿತ ಶುರುವಾಗಲಿದೆ. ಲಿಂಗಾಯತ ಸಮುದಾಯದವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ.

- Advertisement -

Related news

error: Content is protected !!