- Advertisement -
- Advertisement -

ಬೆಂಗಳೂರು: ಇನ್ಮುಂದೆ ಮರಗಳಿಗೆ ಮೊಳೆ ಹೊಡೆಯುವುದು ಅಪರಾಧ ಎಂದು ಹೇಳುವ ಮೂಲಕ ಬಿಬಿಎಂಪಿಯ ಅರಣ್ಯ ಘಟಕ ಮಹತ್ವದ ಆದೇಶ ಹೊರಡಿಸಿದೆ.

ಮರಗಳ ಮೇಲೆ ಜಾಹೀರಾತು ಫಲಕ ಅಳವಡಿಕೆಯೂ ಸಹ ಶಿಕ್ಷಾರ್ಹ ಅಪರಾಧ. ಮರಗಳಿಗೆ ಮೊಳೆ, ಸ್ಟಾಪ್ಲರ್ ಪಿನ್ ಹೊಡೆಯುವುದನ್ನು ಈ ಆದೇಶದ ಮೂಲಕ ನಿಷೇಧಿಸಲಾಗಿದೆ. ವಿದ್ಯುತ್ ದೀಪ, ಕೇಬಲ್ ಅಳವಡಿಕೆಗೂ ಬಿಬಿಎಂಪಿ ನಿರ್ಬಂಧ ಹೇರಿದೆ. ಕಟ್ಟಡ ನಿರ್ಮಾಣ ಹಂತದಲ್ಲಿ ಕಬ್ಬಿಣದ ರಾಡು ಹೊಡೆಯುವುದನ್ನೂ ನಿಷೇಧ ಮಾಡಲಾಗಿದೆ.

ಮೊಳೆ, ಸ್ಟಾಪ್ಲರ್, ಕಬ್ಬಿಣ ಹೊಡೆಯುವುದರಿಂದ ಮರಗಳಿಗೆ ಹಾನಿಯಾಗುವ ಆತಂಕವಿದ್ದು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ 1976 ಕಲಂ 8ರ ಪ್ರಕಾರ ಮರಗಳಿಗೆ ಮೊಳೆ, ಸ್ಟಾಪ್ಲರ್ ಪಿನ್ ಹೊಡೆಯುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಕೂಡಲೇ ಜಾಹೀರಾತು, ಕೇಬಲ್ ಗಳನ್ನ ತೆರವುಗೊಳಿಸುವಂತೆ ಸಬಂಧಪಟ್ಟವ್ರಿಗೆ ಸೂಚನೆ ನೀಡಲಾಗಿದೆ.



- Advertisement -