Friday, June 26, 2026
spot_imgspot_img
spot_imgspot_img

ನೇಣು ಬಿಗಿದ ಸ್ಥಿತಿಯಲ್ಲಿ ಆರ್‌ಟಿಐ ಕಾರ್ಯಕರ್ತನ ಶವ ಪತ್ತೆ

- Advertisement -
- Advertisement -

ಅರೆನಗ್ನವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಆರ್‌ಟಿಐ ಕಾರ್ಯಕರ್ತನೊಬ್ಬನ ಶವ ಬೆಂಗಳೂರು ಆನೆಕಲ್‍ನ ಜಿಗಣಿ ಸಮೀಪದ ಮಾದಪಟ್ಟಣದಲ್ಲಿ ಪತ್ತೆಯಾಗಿದೆ.

ಆರ್‌ಟಿಐ ಕಾರ್ಯಕರ್ತನ ಧಿಡೀರ್ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೃತ ಕಾರ್ಯಕರ್ತನನ್ನು ಪ್ರದೀಪ್ (38) ಎಂದು ಗುರುತಿಸಲಾಗಿದೆ. ಕಾರಿನ ಶೆಡ್‍ನಲ್ಲಿ ಆತನ ದೇಹ ಅರೆನಗ್ನವಾಗಿ ಪತ್ತೆಯಾಗಿದೆ. ಶೆಡ್‍ನಲ್ಲಿದ್ದ ಕಬ್ಬಿಣದ ಪೈಪ್ ಒಂದಕ್ಕೆ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಶವ ಚೇರ್ ಮೇಲೆ ಇಳಿ ಬಿದ್ದಿದ್ದು, ಹಲವು ಅನುಮಾನಗಳಿಗೆ ಸಹ ಕಾರಣವಾಗಿದೆ.

ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!