Thursday, March 28, 2024
spot_imgspot_img
spot_imgspot_img

ಕೆಎಲ್ ರಾಹುಲ್​​ಗೆ ಭಾರತ ತಂಡದ ಉಪನಾಯಕನ ಜವಾಬ್ದಾರಿ- ‘ನನಗೆ ಹೆಮ್ಮೆಯ ಕ್ಷಣ’ ಎಂದ ಕನ್ನಡಿಗ

- Advertisement -G L Acharya panikkar
- Advertisement -

ಬೆಂಗಳೂರು(ಅ.30): ಬಿಸಿಸಿಐ ಇದೀಗ ಕೆ.ಎಲ್​ ರಾಹುಲ್ ಅವರಿಗೆ ಹೊಸ ಜವಾಬ್ದಾರಿಯನ್ನ ನೀಡಿದೆ. ಆಸ್ಟ್ರೇಲಿಯಾ ಕ್ರಿಕೆಟ್​ ಸರಣಿಯಲ್ಲಿ ವಿಕೆಟ್ ಕೀಪಿಂಗ್ ಜೊತೆಗೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನೆಡೆಸುವಂತೆ ಉಪನಾಯಕನ ಜವಾಬ್ದಾರಿಯನ್ನ ಕೆಎಲ್ ರಾಹುಲ್​​ಗೆ ನೀಡಲಾಗಿದೆ. ಹೀಗಾಗಿ ಕೆಎಲ್​ ರಾಹುಲ್ ಟಿ-20 ಪಂದ್ಯ ಹಾಗೂ ಏಕದಿನ ಕ್ರಿಕೆಟ್ ಸರಣಿಯಲ್ಲಿ ಉಪನಾಯಕನಾಗಿ ತಮ್ಮ ಜವಾಬ್ದಾರಿಯನ್ನ ಪ್ರದರ್ಶನ ಮಾಡಲಿದ್ದಾರೆ.

ಬಿಸಿಸಿಐ ತಮಗೆ ನೀಡಿರುವ ಜವಾಬ್ದಾರಿ ಬಗ್ಗೆ ಮಾತನಾಡಿರುವ ಕೆಎಲ್ ರಾಹುಲ್.. ತುಂಬಾ ಸಂತೋಷ ಆಗ್ತಿದೆ. ನನಗೆ ಹೆಮ್ಮೆಯ ಕ್ಷಣ. ಬಿಸಿಸಿಐ ಜವಾಬ್ದಾರಿ ನೀಡುತ್ತೆ ಅಂತಾ ನಾನು ನಿರೀಕ್ಷೆ ಮಾಡಿರಲಿಲ್ಲ. ನನಗೆ ಸಂತೋಷವಾಗಿದೆ. ಜವಾಬ್ದಾರಿ ತೆಗೆದುಕೊಳ್ಳಲು ಮತ್ತು ಸವಾಲನ್ನ ಎದುರಿಸಲು ಸಿದ್ಧನಿದ್ದೇನೆ. ನನ್ನ ತಂಡಕ್ಕಾಗಿ ನನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸ್ತೇನೆ. ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ನನ್ನ ಎದುರು ಐಪಿಎಲ್ ಟೂರ್ನಿ ಇದೆ. ಇದನ್ನ ಸವಾಲಾಗಿ ಸ್ವೀಕಾರ ಮಾಡಿದ್ದೇನೆ. ಹೀಗಾಗಿ ನನ್ನ ಸದ್ಯದ ಏಕಾಗ್ರತೆ ಐಪಿಎಲ್​ ಮೇಲಿದೆ ಎಂದಿದ್ದಾರೆ.

ಸದ್ಯ ಕೆಎಲ್​ ರಾಹುಲ್ ಐಪಿಎಲ್​​ನಲ್ಲಿ ಸಖತ್ತಾಗಿ ಮಿಂಚುತ್ತಿದ್ದಾರೆ. ಆರೆಂಜ್ ಕ್ಯಾಪ್​ ತೊಟ್ಟು ತಂಡವನ್ನ ಮುನ್ನೆಡೆಸುತ್ತಿರುವ ನಾಯಕ ಕೆ.ಎಲ್​.ರಾಹುಲ್​​, 2020 ರ ಐಪಿಎಲ್​ ಟೂರ್ನಿಯಲ್ಲಿ ರನ್​​ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

- Advertisement -

Related news

error: Content is protected !!