



ಟೆಹ್ರಾನ್: ಇರಾನ್ನ ಬಂದರು, ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ಕೂಡ ಪ್ರತೀಕಾರಕ್ಕೆ ಮುಂದಾಗಿದ್ದು, ಬಹ್ರೇನ್ನಲ್ಲಿರುವ ಅಮೆರಿಕದ 5ನೇ ನೌಕಾಪಡೆಯ ಪ್ರಧಾನ ಕಚೇರಿ ಹಾಗೂ ಕುವೈತ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ.
ಅಮೆರಿಕ ದಾಳಿಗೆ ವಿನಾಶಕಾರಿ ರೀತಿಯಲ್ಲೇ ಪ್ರತಿಕ್ರಿಯೆ ನೀಡುವುದಾಗಿ ಇರಾನ್ನ ಕ್ರಾಂತಿಕಾರಿ ಪಡೆ ಪ್ರತಿಜ್ಞೆ ಮಾಡಿದ ಬಳಿಕ ದಾಳಿಗಳು ಸಂಭವಿಸಿದೆ.
ಇರಾನ್ ಮಿಸೈಲ್ ದಾಳಿ ಬಳಿಕ ಬಹ್ರೇನ್ನ ಐದನೇ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಜೊತೆಗೆ ಕುವೈತ್ನ ಮಿಲಿಟರಿ ನೆಲೆಗಳ ಇರಾನ್ ನಡೆಸಿದ ದಾಳಿಯ ದೃಶ್ಯಗಳನ್ನು ಇರಾನ್ ಮಾಧ್ಯಮಗಳು ಪ್ರಸಾರ ಮಾಡುವಾಗ ʻಅಮೆರಿಕನ್ ಭಯೋತ್ಪಾದಕರ ನೆಲೆʼ ಎಂದು ಉಲ್ಲೇಖಿಸಿವೆ.
ಬಹ್ರೇನ್ನ ರಾಜಧಾನಿ ಮನಾಮದಲ್ಲಿ ಸ್ಫೋಟದ ಶಬ್ದ ಕೇಳಿಬರುತ್ತಿದ್ದಂತೆ ಅಧಿಕಾರಿಗಳು ಸೈರನ್ ಮೊಳಗಿಸಿ ದಾಳಿ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಜೊತೆಗೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತಡೆಯಲು ಸನ್ನದ್ಧವಾಗಿವೆ ಎಂದು ಕುವೈತ್ ನಲ್ಲಿರೋ ಅಮೆರಿಕ ಪಡೆ ಹೇಳಿಕೊಂಡಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.








