Tuesday, July 1, 2025
spot_imgspot_img
spot_imgspot_img

ಸವದತ್ತಿಯಲ್ಲಿ ಭೀಕರ ಅಪಘಾತ: 7 ಮಂದಿ ಸ್ಥಳದಲ್ಲೇ ಸಾವು,10ಕ್ಕೂ ಅಧಿಕ ಮಂದಿ ಗಾಯ..

- Advertisement -
- Advertisement -

ಬೆಳಗಾವಿ : ಬೊಲೆರೋ ಹಾಗೂ ಟಾಟಾ ಏಸ್ ಮಧ್ಯೆ ಅಪಘಾತ ನಡೆದು, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ 7 ಜನ ಕೂಲಿ ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಸವದತ್ತಿ-ಧಾರವಾಡ ರಸ್ತೆಯಲ್ಲಿ ಮಹಿಂದ್ರ ಬೊಲೆರೊ ಹಾಗೂ ಟಾಟಾ ಏಸ್​ ವಾಹನ ಮುಖಾಮುಖಿ ಡಿಕ್ಕಿಯಾಗಿದ್ದು, ಎರಡೂ ವಾಹನಗಳು ಜಖಂಗೊಂಡಿವೆ. ಟಾಟಾ ಏಸ್​​ನಲ್ಲಿದ್ದವರೆಲ್ಲ ಕೂಲಿ ಕಾರ್ಮಿಕರಾಗಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಘಟನೆಯಿಂದ ಟಾಟಾ ಏಸ್​ನಲ್ಲಿದ್ದ 6 ಜನ ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರೆ ಇನ್ನೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತರಲ್ಲಿ ಐವರು ಮಹಿಳೆಯರು ಹಾಗೂ ಓರ್ವ ಪುರುಷ ಎಂದು ತಿಳಿದು ಬಂದಿದೆ. ಮೃತರ ಬಗ್ಗೆ ಹೆಚ್ಚಿನ ವಿವರ ತಿಳಿದು ಬಂದಿಲ್ಲ. ಘಟನೆಯಲ್ಲಿ 10ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.  ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Related news

error: Content is protected !!