Saturday, June 28, 2025
spot_imgspot_img
spot_imgspot_img

ಬೆಳ್ತಂಗಡಿ : ನೇತ್ರಾವತಿ ಬಳಿ ಇಬ್ಬರು ಮಹಿಳೆಯರ ಮೃತದೇಹ ಪತ್ತೆ !

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆಕಟ್ಟಿನ ಬಳಿ ಇಬ್ಬರು ಅಪರಿಚಿತ ಮಹಿಳೆಯರ ಮೃತದೇಹ ಪತ್ತೆಯಾಗಿದೆ. ಮೃತ ಇಬ್ಬರು ಮಹಿಳೆಯರು ಸುಮಾರು 45 ಮತ್ತು 25 ವರ್ಷ ಪ್ರಾಯದವರು ಎಂದು ಅಂದಾಜಿಸಲಾಗಿದೆ.

ಯಾತ್ರಾರ್ಥಿಗಳು ಮೃತದೇಹಗಳನ್ನು ಮೊದಲು ನೋಡಿದ್ದು, ಅವರು ನೀಡಿದ ಮಾಹಿತಿಯಂತೆ ಪೋಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಮೃತದೇಹಗಳು ಕವುಚಿ ಮಲಗಿದ ಸ್ಥಿತಿಯಲ್ಲಿ ನೀರಿನಲ್ಲಿ ಕಂಡುಬಂದಿತ್ತು.‌ ಮೃತದೇಹದ ಬಳಿ ಅವರ ಯಾವುದೇ ಗುರುತು ವಿಳಾಸಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!