Thursday, June 4, 2026
spot_imgspot_img
spot_imgspot_img

ಬೆಳ್ತಂಗಡಿ: ಕಾಡಿಗೆ ಸೊಪ್ಪು ತರಲು ಹೋದ ವ್ಯಕ್ತಿ ಕುಸಿದು ಬಿದ್ದು ಸಾವು..!

- Advertisement -
- Advertisement -

ಬೆಳ್ತಂಗಡಿ: ಮಕ್ಕಳಿಗೆ ಮದ್ದಿನ ಸೊಪ್ಪು ತರಲು ಮಾಲ್ಯಳ ಕಾಡಿಗೆ ಹೋದ ವ್ಯಕ್ತಿ ಕುಸಿದು ಬಿದ್ದು ಸಾವನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಪೊದಿಂಬಿಲ ನಿವಾಸಿ ರಾಜೇಶ್ ಆಚಾರ್ಯ (36) ಎಂದು ಗುರುತಿಸಲಾಗಿದೆ.

ಮನೆಯಿಂದ ಹೋದವರು ಮನೆಗೆ ವಾಪಸ್ಸಾಗದೆ ಇದ್ದಾಗ ಮನೆಯವರು ಮತ್ತು ಸಾರ್ವಜನಿಕರು ಹುಡುಕಾಟದಲ್ಲಿ ತೊಡಗಿದರು. ಸ್ವಲ್ಪ ಸಮಯದ ನಂತರ ಕಲ್ಲಿನ ಸೆರೆಯಲ್ಲಿ ಸಿಲುಕಿದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಮೃತರು ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ಬೆಳ್ಳಿಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!